ಹುಬ್ಬಳ್ಳಿ: ವೈಯಕ್ತಿಕ ಕೆಲಸಗಳಿಗಾಗಿ ನಾನು ದೆಹಲಿಗೆ ಹೋಗಿದ್ದೆ, ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿ ಆಗಿಲ್ಲ, ನನಗಿಂತ ಒಂದು ದಿನ ಮುಂಚೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ಅದಾದ ನಂತರ ನಾನು ಹೋಗಿದ್ದೆ, ಅವರು ಪ್ರಧಾನಿಗಳನ್ನು ಭೇಟಿಯಾಗಲು ಹೋಗಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಈ ವೇಳೆ ಯಾವುದೇ ನಾಯಕರನ್ನು ಭೇಟಿಯಾಗಿಲ್ಲ. ಯಾವುದೇ ಚುನಾವಣೆಯ ವಿಚಾರವನ್ನು ಚರ್ಚಿಸಿಲ್ಲವೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಧಾರವಾಡ ಆಕಾಂಕ್ಷಿಯಾಗಿ ಶೆಟ್ಟರ್ ಹೆಸರು ಶಿಫಾರಸ್ಸು ವಿಚಾರ, ಇನ್ನು ಯಾರ ಹೆಸರನ್ನು ಕಳುಹಿಸಿಲ್ಲ. ಅದು ಹೇಗೆ ನನ್ನದೇ ಒಂದು ಹೆಸರು ಕಳಿಸಿದ್ದಾರೆ ಅಂತ ಹೇಳ್ತೀರಿ..? ನಿಮಗೆ ಆ ಪಟ್ಟಿ ಕೊಟ್ಟವರು ಯಾರು..?ಮೊನ್ನೆಯಷ್ಟೇ ವೀಕ್ಷಕರ ಸಭೆಯಾಗಿದೆ. ಟಿಕೆಟ್ ಆಕಾಂಕ್ಷಿಗಳ ಶಾರ್ಟ್ ಲಿಸ್ಟ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ.
ಇಷ್ಟರ ನಡುವೆಯೇ ನನ್ನದೊಂದೇ ಹೆಸರು ಕಳಿಸಿದ್ದಾರೆ ಅಂತ ಹೇಳ್ತಿದ್ದೀರಿ. ಸಿಎಂ ಸಮ್ಮುಖದಲ್ಲಿಯೇ ನಾನು ಚುನಾವಣೆಗೆ ನಿಲ್ಲಲ್ಲ ಅಂತ ಹೇಳಿದ್ದೇನೆ. ಕಾಂಗ್ರೆಸ್ ನಿಂದ ಯಾರನ್ನೇ ನಿಲ್ಲಿಸಿದರೂ ನಾನು ಫೈಟ್ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ಲೋಕಸಭಾ ಚುನಾವಣೆಗೂ ನನ್ನ ದೆಹಲಿ ಭೇಟಿಗೂ ಸಂಬಂಧವಿಲ್ಲ. ಜಗದೀಶ್ ಶೆಟ್ಟರ್ ಹೇಳಿದರು.