ಜೆರುಸಲೇಂ: ಕದನ ವಿರಾಮ ಘೋಷಣೆಯಾದ ಹಿನ್ನೆಲೆಯಲ್ಲಿ ಇಸ್ರೇಲ್ ಜೈಲಿನಿಂದ ಹಲವರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಫೆಲೆಸ್ತೀನ್ ಕೈದಿಗಳ ಗುಂಪಿನಲ್ಲಿದ್ದ ಪತ್ರಕರ್ತೆ ರುಲಾ ಹಸ್ಸನೇನ್ ಅವರು ಜೈಲಿನಲ್ಲಿ ನನಗೆ ಆರೋಗ್ಯ ಸಮಸ್ಯೆಯಿದ್ದರೂ ಚಿಕಿತ್ಸೆ ಕೊಡಿಸದೆ ವೈದ್ಯಕೀಯ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಈ ಕುರಿತು ಪತ್ರಕರ್ತೆ ರುಲಾ ಹಸನೈನ್ ಅವರ ಸಹೋದರಿ Al Jazeera ಜೊತೆ ಮಾತನಾಡಿದ್ದು, ಸಹೋದರಿ ಅನಾರೋಗ್ಯ ಪೀಡಿತಳಾಗಿದ್ದರೂ ಜೈಲಿನಲ್ಲಿ ಚಿಕಿತ್ಸೆ ಕೊಡಿಸದೆ ನಿರ್ಲಕ್ಷಿಸಲಾಗಿದೆ. ಆಕೆ ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿದೆ ಎಂದಿದ್ದಾರೆ.
ವಟ್ಟನ್ ಮೀಡಿಯಾ ನೆಟ್ವರ್ಕ್ ನ ಸಂಪಾದಕಿಯಾಗಿರುವ ರುಲಾ ಹಸ್ಸನೇನ್ ಅವರನ್ನು 2024ರ ಮಾರ್ಚ್ 19ರಂದು ಇಸ್ರೇಲ್ ಪಡೆಗಳು ಯಾವುದೇ ವಿಚಾರಣೆಯಿಲ್ಲದೆ ಬಂಧಿಸಿದ್ದರು. ನನ್ನ ಸಹೋದರಿ ಜೈಲಿನಲ್ಲಿ ಅಸ್ವಸ್ಥಗೊಂಡಾಗ ವೈದ್ಯಕೀಯ ನಿರ್ಲಕ್ಷ್ಯ ಮಾಡಲಾಗಿದೆ. ಇದು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹಸ್ಸನೇನ್ ಅವರ ಸಹೋದರಿ ಆರೋಪಿಸಿದ್ದಾರೆ.