ಭಾರತದ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಶಾಕಿಂಗ್ ಹೇಳಿಕೆ ನೀಡಿದ್ದು, ಮದುವೆಗೂ ಮುನ್ನವೇ ನಾನು ತಾಯಿ ಆಗಿದ್ದೆ ಎಂದು ಹೇಳಿದ್ದಾರೆ.
ಮಂಡ್ಯ ರೈತರ ಜೀವನಾಡಿ ಮೈ ಶುಗರ್ ಕಾರ್ಖಾನೆಯ 25 ವರ್ಷದ ವಿದ್ಯುತ್ ಬಿಲ್ ಮನ್ನಾ: CM ನಿರ್ಧಾರಕ್ಕೆ ಕಾರಣ ಇಲ್ಲಿದೆ!
ಹೌದು, ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ. ರಣಬೀರ್ ಕಪೂರ್ ಮಗುವಾಗಿದ್ದ, ಆತನನ್ನು ನೋಡಿಕೊಳ್ಳುವ ಮೂಲಕವೇ ತಾನು ಒಳ್ಳೆಯ ತಾಯಿಯಾಗಿದ್ದೆ” ಎಂದು ಅನುಷ್ಕಾ ಹೇಳಿದ್ದಾರೆ.
ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2015 ರಲ್ಲಿ ಬಿಡುಗಡೆಯಾದ ಬಾಂಬೆ ವೆಲ್ವೆಟ್’ನಲ್ಲಿ ಮೊದಲು ಒಟ್ಟಿಗೆ ಕಾಣಿಸಿಕೊಂಡರು.
ಅದೇ ಚಿತ್ರದ ಪ್ರಚಾರದ ಸಂದರ್ಭದಲ್ಲಿ, “ರಣಬೀರ್ ಕಪೂರ್ ಮಗುವಿನಂತೆ ವರ್ತಿಸುತ್ತಾನೆ. ಆತನನ್ನು ನೋಡಿಕೊಳ್ಳುತ್ತಿದ್ದ ನಾನು ಒಬ್ಬ ಒಳ್ಳೆಯ ತಾಯಿಯಾಗಿ ಬದಲಾದೆ. ಇದಕ್ಕೆ ಆತನೇ ಕಾರಣ ಎಂದು ಭಾವಿಸುತ್ತೇನೆ” ಎಂದು ಅನುಷ್ಕಾ ಬಹಿರಂಗಪಡಿಸಿದ್ದರು.
ನನ್ನ ಬ್ಯಾಗ್ ಓಪನ್ ಮಾಡೋದು, ಫೋನ್’ನಲ್ಲಿ ಬ್ಯುಸಿ ಇದ್ದರೆ, ಏನು ಮಾಡುತ್ತಿದ್ದೇನೆ ಎಂದು ನೋಡೋದು.. ಹೀಗೆ ಅನೇಕ ರೀತಿಯಲ್ಲಿ ಕೀಟಲೆ ಮಾಡುತ್ತಿದ್ದ. ಇದನ್ನೆಲ್ಲಾ ನೋಡಿದಾಗ ಮದುವೆಗೂ ಮುಂಚೆಯೇ ನಾನು ತಾಯಿಯಾಗಿ ಆತನನ್ನು ಸಹಿಸಿಕೊಂಡಿದ್ದೆ ಅನಿಸುತ್ತದೆ. ರಣಬೀರ್ ಕಪೂರ್ ಜೊತೆ ಕಳೆದ ಕ್ಷಣಗಳೇ ಅದಕ್ಕೆ ಕಾರಣ” ಎಂದಿದ್ದಾರೆ.