ಮದುವೆ ಆಗಿ ಅಂತ ಕೂತ್ಕೋತಿನಿ, ಆಗ್ತೀರಾ?’ ಎಂದು ಕಾರ್ತಿಕ್ಗೆ ನಮ್ರತಾ ನೇರ ಪ್ರಶ್ನೆ ಹಾಕಿದ್ದಾರೆ.
ಹೌದು ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಗಳು ನಡೆಯುತ್ತಿವೆ. ಈ ವಾರ ಒಬ್ಬರಿಗೆ ಇದ್ದ ಕ್ರೇಜ್, ಮತ್ತೊಬ್ಬರಿಗೆ ಇರೋದಿಲ್ಲ. ಹೀಗಾಗಿ ಗೆಲುವು ಯಾರಿಗೆ ಸಿಗಲಿದೆ ಎಂಬುವ ಲೆಕ್ಕಾಚಾರ ಹಾಕುವುದೇ ಕೊಂಚ ಕಷ್ಟವೆ.
ಇದೀಗ ಕಾರ್ತಿಕ್ ಹಾಗೂ ನಮ್ರತಾ ಕ್ಲೋಸ್ ಆಗುತ್ತಿದ್ದಾರೆ. ಈಗ ಇಬ್ಬರೂ ಓಪನ್ ಆಗಿ ಫ್ಲರ್ಟ್ ಮಾಡಿದ್ದಾರೆ. ಇದು ಸಖತ್ ಫನ್ನಿ ಆಗಿತ್ತು.
ನಮ್ರತಾ ಜೊತೆ ಡೇಟ್ಗೆ ಹೋಗಬೇಕು ಎಂಬುದು ಕಾರ್ತಿಕ್ ಕನಸು. ಮೊದಲಿನಿಂದಲೂ ಈ ಬಗ್ಗೆ ಮಾತನಾಡುತ್ತಲೇ ಬರುತ್ತಿದ್ದಾರೆ. ಇದನ್ನು ನಮ್ರತಾ ಹಾಗೂ ಕಾರ್ತಿಕ್ ಇಬ್ಬರೂ ಫನ್ ಆಗಿಯೇ ಸ್ವೀಕರಿಸಿದ್ದಾರೆ. ತಮ್ಮ ತಾಯಿ ಬಂದಾಗಲೂ ಕಾರ್ತಿಕ್ ಈ ವಿಚಾರ ತೆಗೆದಿದ್ದರು. ‘ನಾನು ನಮ್ರತಾ ಜೊತೆ ಡೇಟ್ಗೆ ಹೋಗಲೇ’ ಎಂದು ಕೇಳಿದ್ದರು. ಈಗ ಕಾರ್ತಿಕ್ ಹಾಗೂ ನಮ್ರತಾ ಆಡಿದ ಮಾತು ಗಮನ ಸೆಳೆಯುತ್ತಿದೆ.
ಕಾರ್ತಿಕ್ ಅವರು ಅಡುಗೆ ಮನೆಗೆ ಹೊರಟಿದ್ದರು. ಈ ವೇಳೆ ಕಾರ್ತಿಕ್ ಅವರನ್ನು ನಮ್ರತಾ ಕರೆದರು. ‘ಐದು ನಿಮಿಷ ಇಲ್ಲಿ ಬನ್ನಿ. ಕುಳಿತು ನನ್ನನ್ನು ನೋಡಿ’ ಎಂದಿದ್ದಾರೆ. ಕಾರ್ತಿಕ್ ಈ ಮಾತನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಜೊತೆಗೆ ನಮ್ರತಾ ಇದ್ದಲ್ಲಿ ಹೋಗಿ ಕುಳಿತಿದ್ದಾರೆ. ‘ನಾನು ಜೋಕ್ ಮಾಡಿದ್ದು. ನೀವು ಗಂಭೀರವಾಗಿ ಸ್ವೀಕರಿಸಿದ್ರಲ್ಲ’ ಎಂದರು ನಮ್ರತಾ.
ರೋಗಿ ಬಯಸಿದ್ದು ಹಾಲು ಅನ್ನ.. ವೈದ್ಯ ಹೇಳಿದ್ದೂ ಅದೇ. ಸುಮ್ನೆ ಹೋಗ್ತಾ ಇದ್ದವನ್ನ ಕರೆದ್ರೆ ಏನು ಮಾಡೋದು’ ಎಂದು ಕಾರ್ತಿಕ್ ಕೇಳಿದರು. ’15 ದಿನದಲ್ಲಿ ಲವ್ ಆಗಿ, ಕಾರ್ತಿಕ್ನೇ ಬೇಕು ಅಂತ ಅತ್ತು ಕರೆದರೆ ಏನು ಮಾಡ್ತೀರಿ? ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ’ ಎಂದು ನಮ್ರತಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಾರ್ತಿಕ್ಗೆ ಏನು ಉತ್ತರ ಹೇಳಬೇಕು ಎಂಬುದೇ ತಿಳಿದಿಲ್ಲ.