ಧಾರವಾಡ: ಇವತ್ತು ನಾವು ಬಹಳ ಕಷ್ಟದ ದಿನಗಳಲ್ಲಿದ್ದೇವೆ. ಸಿಎಂಗೆ ಗೌರವ ಸಿಗುತ್ತಿಲ್ಲ. ಸಭಾಪತಿಗೆ ಗೌರವ ಸಿಗುತ್ತಿಲ್ಲ. ಇದನ್ನೆಲ್ಲ ಗಮನಿಸಿ ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಹೇಳಿದ್ದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ. ಧಾರವಾಡದ ಕವಿವಿಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸದನದಲ್ಲಿ ಎಚ್.ಕೆ.ಪಾಟೀಲ ಎಂಬ ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಚುನಾವಣೆ ಸುಧಾರಣೆ ಆಗುವವರೆಗೂ ಪ್ರಜಾಪ್ರಭುತ್ವ ಸುಧಾರಣೆ ಆಗುವುದಿಲ್ಲ. ನಮ್ಮಲ್ಲಿ ಮೂರು ಪಕ್ಷ ಇವೆ. ಯಾರ್ಯಾರು ಸೋತ್ತಿದ್ದಾರೆ, ಗೆದ್ದಿದ್ದಾರೆ ಅವರೆಲ್ಲ ಒಂದೇ ಕೆಲಸ ಮಾಡಿದ್ದು. ಅವರೆಲ್ಲ ಯಾರಿಗೆ ಏನು ಕೊಡಬೇಕೋ ಕೊಟ್ಟು ಬಿಟ್ಟಿದ್ದಾರೆ. ಟೋಪಿ ಹಾಕಿಸಿಕೊಂಡವನು ಅಭ್ಯರ್ಥಿ ಗೆದ್ದು ಶಾಸಕ, ಸಚಿವ ಆದ ಮೇಲೆ ಆತ ಎಲ್ಲರೂ ಟೋಪಿ ಹಾಕುತ್ತಾನೆ. ಈ ವ್ಯವಸ್ಥೆ ಹೇಗೆ ಸುಧಾರಣೆಯಾಗುತ್ತದೆಯೋ ಗೊತ್ತಿಲ್ಲ. ಜಾತಿ, ದುಡ್ಡು ಇದ್ದವರು ಶಾಸನ ಸಭೆಗೆ ಬರುತ್ತಾರೆ.
16ರ ಹುಡುಗನೊಂದಿಗೆ 32 ವರ್ಷದ ಮಹಿಳೆಯ ಲವ್.! 9 ತಿಂಗಳ ಮಗುವಿಗೆ ತಂದೆಯಾದ ಬಾಲಕ
ವಿಧಾನ ಪರಿಷತ್ಗೆ ಸಾಹಿತಿಗಳು, ಸಂಗೀತಗಾರರು ಬರಬೇಕು ಎಂದಿದೆ. ಆದರೆ, ಅವರನ್ನು ಈಗ ನಾವು ದೀಪ ಹಚ್ಚಿ ಹುಡುಕಬೇಕು. ಈ ಬಾರ ಬೆಳಗಾವಿ ಅಧಿವೇಶನದಲ್ಲಿ 6 ಬಾರಿ ಸದನ ಮುಂದೂಡಲಾಯಿತು ಎಂದರು. ರಾಜಕಾರಣ ಎಂದರೆ ಕೈ ಕೈ ಮಿಲಾಯಿಸೋದಲ್ಲ. ಇವತ್ತು ಅವರ ಮೇಲೆ ಟೀಕೆ, ಅವರು ಇವರ ಟೀಕೆ ನಡೆಯುತ್ತಿದೆ. ಶಾಸನ ಸಭೆಯಲ್ಲಿ ಎಲ್ಲರೂ ಗಂಟು ಮುಖ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಈಗ ಏನೇ ತಪ್ಪು ಮಾಡಿದರೂ ಎಲ್ಲದಕ್ಕೂ ಡಿಫೈನ್ ಮಾಡಿಕೊಳ್ಳುತ್ತಾರೆ. ಸದನ ಇರುವುದು ತೆರಿಗೆ ಹಣ ಸದುಪಯೋಗ ಹೇಗೆ ಆಗಬೇಕು ಎಂದು ವಿಚಾರ ಮಾಡಲು.
ಶಿಕ್ಷಕ ಇದ್ದವನು ನಾನು ಶಾಸಕನಾದೆ. ನಾನು ಪ್ರಮಾಣ ಮಾಡಿದಂತೆ ನಡೆದುಕೊಂಡಿದ್ದೇನೆ. ಯಾರ ಬಳಿ ಹಣ ಪಡೆಯದೇ ರಾಜಕೀಯ ಮಾಡದೇ ಜಾತಿ ಮಾಡದೇ ಶಿಕ್ಷಕರಿಗೆ ಸಹಾಯ ಮಾಡಿದ್ದೇನೆ. ನಾವು, ಎಚ್.ಕೆ.ಪಾಟೀಲ್ ಹೊಂದಾಣಿಕೆ ರಾಜಕಾರಣ ಮಾಡಿದ್ದು ನಿಜ. ಆದರೆ ಪಕ್ಷ ಅಂತ ಬಂದಾಗ ನನಗೆ ಸೋಲಿಸಲು ಎಚ್ಕೆ ಬಹಳ ಓಡಾಡಿದರು. ಆದರೆ ನಾನು ಹಾಗೆ ಮಾಡಲಿಲ್ಲ ಎಂದರು.