ಬೆಂಗಳೂರು:- ವಾಹನ ಚಾಲಕರಿಗೆ ಟ್ರಾಫಿಕ್ ಪೊಲೀಸರು ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ. ಆ ಮೂಲಕ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚಾಗುತ್ತಿರುವ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ.
ತಲೆ ಕೂದಲಿಗೆ ಎಣ್ಣಿ ಹಚ್ಚುವುದು ಹೇಗೆ!?.. ಇದರಿಂದಾಗುವ ಬೆನಿಫಿಟ್ ಬಗ್ಗೆ ತಿಳಿಯಿರಿ..!
ಇನ್ನು ಮುಂದೆ ಪ್ರತಿ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಮಾತ್ರ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ಚಾಲನೆ ಮಾಡಬೇಕು. ಒಂದು ವೇಳೆ ಮೀತಿ ಮೀರಿದರೆ ಓವರ್ ಸ್ಪೀಡ್
ಕಳೆದ ಆರು ತಿಂಗಳಿಂದ ಹೆಚ್ಚಾಗಿ ಈ ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಓವರ್ ಸ್ಪೀಡ್ ನಿಂದ ದಾಖಲಾಗಿರುತ್ತದೆ. ಅತಿ ವೇಗವಾಗಿ ಚಾಲನೆ ಮಾಡುತ್ತಿರುವ ವಾಹನಗಳಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸ್ವಯಂ ಚಾಲಿತವಾಗಿ ಪತ್ತೆ ಚ್ಚುವ 8 ಸ್ಪೀಡೋ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಕೆಆರ್ ಪುರದ ಹೆಬ್ಬಾಳ ಮೇಲ್ಸೇತುವೆಯ ರ್ಯಾಂಪ್ ಅಪ್ ಮುಚ್ಚುವ ಕಾಮಗಾರಿ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಮೇ 14ರಿಂದ ಹೆಬ್ಬಾಳ ಫ್ಲೈಓವರ್ ಮೇಲೆ ಪ್ರಯಾಣಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಹೆಬ್ಬಾಳ ಮೇಲ್ಸೇತುವೆಯನ್ನು ಮುಚ್ಚುವುದರಿಂದ ನಾಗವಾರದಿಂದ ಹೆಬ್ಬಾಳ ಮೇಲ್ಸೇತುವೆ ಕಡೆಗೆ ಹೋಗುವ ಎಲ್ಲಾ ವಾಹನಗಳಿಗೆ ಸಮಸ್ಯೆ ಉಂಟಾಗಲಿದೆ.
ಕಾಮಗಾರಿ ಚಾಲ್ತಿಯಲ್ಲಿರುವ ಕಾರಣ ಇದಕ್ಕೂ ಮುನ್ನ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ಮಾತ್ರ ನಿರ್ಬಂಧವನ್ನು ವಿಧಿಸಲಾಗಿತ್ತು. ಆದರೆ ಈಗ ಅದು ಎಲ್ಲಾ ರೀತಿಯ ವಾಹನಗಳಿಗೂ ಹೆಬ್ಬಾಳ ಮೇಲ್ಸೇತುವೆಯ ಮೇಲೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.
ಹೆಬ್ಬಾಳ ಮೇಲ್ಸೇತುವೆ ಬಂದ್ನಿಂದ ಆಗುವ ಅನಾನುಕೂಲತೆಯನ್ನು ತಗ್ಗಿಸಲು, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.