ನಾನು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಚಿಟ್ ಚಾಟ್ವೊಂದರಲ್ಲಿ ಮಾತನಾಡಿದ ರೋಹಿತ್ ಶತ್ಮಾ ಟೆಸ್ಟ್ಗೆ ನಿವೃತ್ತಿ ಘೋಷಿಸುವ ಇರಾದೆಯಲ್ಲಿ ಎಂದಿದ್ದಾರೆ.
ನಾನು 2 ಮಕ್ಕಳ ತಂದೆ, ಹಾಗಾಗಿ ನಾನು ಸಹ ಸಂವೇದನಾಶೀಲ, ಪ್ರಬುದ್ಧ, ಯಾವಾಗ ಏನು ಮಾಡಬೇಕೆಂದು ನನಗೆ ತಿಳಿದಿದೆ. ಔಟ್ ಆಫ್ ಫಾರ್ಮ್ನಲ್ಲಿರುವ ನಾನು ಇಂತಹ ಮಹತ್ವದ ಪಂದ್ಯವನ್ನು ಆಡಬಾರದು. ಆಡಲು ಅವಕಾಶ ಸಿಗಬಾರದು. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ: ಬೆಚ್ಚಿಬಿದ್ದ ಜನ!
ನಾನು ಸಿಡ್ನಿ ಟೆಸ್ಟ್ ಪಂದ್ಯದಿಂದ ಮಾತ್ರ ಹೊರಗುಳಿದಿದ್ದೇನೆ. ನನ್ನ ಟೆಸ್ಟ್ ಕೆರಿಯರ್ ಅನ್ನು ಅಂತ್ಯಗೊಳಿಸಿಲ್ಲ. ಈಗ ರನ್ಗಳು ಬರುತ್ತಿಲ್ಲ ನಿಜ. ಆದರೆ 5 ತಿಂಗಳು ಕಳೆದರೂ ಬರುವುದಿಲ್ಲ ಎಂಬುದನ್ನು ನಾನು ನಂಬಲ್ಲ. ನಾನಂತು ಕಠಿಣ ಅಭ್ಯಾಸ ಮಾಡುತ್ತೇನೆ. ಈ ಮೂಲಕ ಫಾರ್ಮ್ಗೆ ಮರಳಲಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಹೀಗಾಗಿ ಪ್ರಸ್ತುತ ನಿರ್ಧಾರವು ನನ್ನ ನಿವೃತ್ತಿಯ ನಿರ್ಧಾರವಲ್ಲ. ಹೊರಗೆ ಲ್ಯಾಪ್ಟಾಪ್, ಪೆನ್ನು – ಪೇಪರ್ ಹಿಡಿದು ಕುಳಿತವರು ನಿವೃತ್ತಿ ಯಾವಾಗ ಬರುತ್ತದೆ. ನಾನು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದಿಲ್ಲ. ಹೀಗಾಗಿ ನನ್ನ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ನನ್ನ ನಿವೃತ್ತಿಯನ್ನು ಎದುರು ನೋಡಬೇಡಿ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ