ರಾಮನಗರ:- ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ದೊಡ್ಡ ಹೋರಾಟ ಆಗ್ತಿದೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ಚರ್ಮ ಪಳ-ಪಳ ಹೊಳೆಯಬೇಕಾ!? ದೇಹದ ತೂಕ ಕಡಿಮೆ ಆಗ್ಬೇಕಾ!?, ಎಲ್ಲದಕ್ಕೂ ನಿಮ್ಮ ಮನೆ ಹಿತ್ತಲಿನಲ್ಲಿದೆ ಪರಿಹಾರ!
ಸ್ವಕ್ಷೇತ್ರದಲ್ಲಿಂದು ಪ್ರವಾಸ ಕೈಗೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಕನಕಪುರದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ರಾಜ್ಯಕ್ಕೆ ಸೇವೆ ಮಾಡಬೇಕು ಅಂತ ದೊಡ್ಡ ಪ್ರಯತ್ನ, ಹೋರಾಟ ಆಗ್ತಿದೆ. ಈಗ ಮಾತಾಡಿದ್ರೆ ಮಾಧ್ಯಮಗಳು ವಿವಿಧ ರೀತಿಯಲ್ಲಿ ಬಿಂಬಿಸ್ತವೆ. ಸದ್ಯ ನಾನು ಇಲ್ಲಿ ಡಿಸಿಎಂ ಆಗಿ ಬಂದಿಲ್ಲ, ನಿಮ್ಮ ಶಾಸಕನಾಗಿ ಬಂದಿದ್ದೇನೆ. ಡಿಸಿಎಂ ಏನಿದ್ರೂ ವಿಧಾನಸೌಧದಲ್ಲಿ ಇಲ್ಲಿ ನೀವೆಲ್ಲ ನಮ್ಮ ಮನೆ ಮಕ್ಕಳು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಆಸೆ ವ್ಯಕ್ತಪಡಿಸಿದರು.
ತಿಂಗಳ ಕೊನೆಯ ಶನಿವಾರ ಕ್ಷೇತ್ರದ ಪ್ರವಾಸ ಮಾಡ್ತಿದ್ದೀನಿ. ಇಂದು ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ಮಾಡಿದ್ದೀನಿ. ಈ ಕಾಲೇಜು ಹಿಂದೆ ಮುನ್ಸಿಪಲ್ ಗ್ರೌಂಡ್ ಅತ್ರ ಇತ್ತು. ಅಲ್ಲಿ ಜಾಗದ ಸಮಸ್ಯೆ ಇದ್ದಿದ್ದರಿಂದ ಇಲ್ಲಿ ಒಳ್ಳೆಯ ವಾತಾವರಣದಲ್ಲಿ ಕಾಲೇಜು ನಿರ್ಮಾಣ ಆಗಿದೆ. ನಾನು ಒಂದು ಚಿತ್ರಗಳನ್ನ ತಯಾರಿಸಲು ಹೇಳಿದ್ದೇನೆ. ಈ ಹಿಂದೆ ಕನಕಪುರ ಹೇಗಿತ್ತು, ಈಗ ಕನಕಪುರ ಹೇಗಿದೆ? ನಾನು ಶಾಸಕನಾದ ಬಳಿಕ ಎಷ್ಟೆಲ್ಲಾ ಅಭಿವೃದ್ಧಿ ಆಗಿದೆ ಎಂಬುದನ್ನ ತಿಳಿಸಬೇಕು. ಕನಕಪುರ ಒಂದು ರೀತಿಯ ಎಜುಕೇಶನ್ ಕಾರಿಡಾರ್ ಆಗಬೇಕು ಎಂದು ಕರೆ ನೀಡಿದರು.
ಈಗಾಗಲೇ ಉತ್ತಮ ರಸ್ತೆಗಳು ನಗರಕ್ಕೆ ಇದೆ. ನಾನು ಡಿಸಿಎಂ ಆಗಿ ಇಲ್ಲಿ ಬಂದಿಲ್ಲ, ನಿಮ್ಮ ಶಾಸಕನಾಗಿ ಕೆಲಸ ಮಾಡ್ತಿದ್ದೆನೆ. ನೀವು ಕನಕಪುರದ ವಿದ್ಯಾರ್ಥಿಗಳಲ್ಲ. ನೀವು ಬೆಂಗಳೂರು ಜಿಲ್ಲೆಯ ಮಕ್ಕಳು. ನಿಮ್ಮ ಇತಿಹಾಸ ತೆಗೆದು ನೋಡಿ, ಸಂಗಮ, ಮೇಕೆದಾಟು ವರೆಗೂ ಬೆಂಗಳೂರು ಜಿಲ್ಲೆ. ಚನ್ನಪಟ್ಟಣ, ಮಾಗಡಿ ಎಲ್ಲವೂ ಬೆಂಗಳೂರಿಗೆ ಸೇರುತ್ತೆ. ಯಾವುದೊ ಕಾರಣಕ್ಕೆ ಜಿಲ್ಲೆಯ ಹೆಸರು ಬದಲಾವಣೆ ಆಗಿತ್ತು ಆಷ್ಟೇ. ನಿಮ್ಮ ಕಾಂಪಿಟೇಷನ್ ಗ್ಲೋಬಲ್ ಮಟ್ಟದಲ್ಲಿ ಇರಬೇಕು. ಕನಕಪುರವನ್ನ ಏನು ಮಾಡಬೇಕು ಎಂಬುದನ್ನು ನಾನು ಬಾಯಿಬಿಟ್ಟು ಹೇಳಲ್ಲ. ಅದನ್ನ ಮಾಡಿ ತೋರಿಸುವ ಕೆಲಸ ಮಾಡ್ತೇನೆ ಎಂದು ಹೇಳಿದರು.