ಬೆಂಗಳೂರು: ನಟಿ ರನ್ಯಾ ರಾವ್ ಬಂಧನದ ಬಗ್ಗೆ ಎಡಿಜಿಪಿ ಕೆ.ರಾಮಚಂದ್ರ ರಾವ್ ಪತ್ರಿಕಾ ಪ್ರಕಟಣೆ ಹೊರಡೊಸಿದ್ದಾರೆ ಎನ್ನಲಾಗ್ತಿದೆ. ಆದ್ರೆ ಪ್ರೆಸ್ ನೋಟ್ ನಲ್ಲಿ ರಾಮಚಂದ್ರರಾವ್ ಗೆ ಸಂಬಂಧಿಸಿದ ಯಾವೂದೆ ಸಹಿ ಆಗಲಿ ಹೆಸರಾಗಲಿ ಇಲ್ಲ. ಇನ್ನು ಪ್ರೆಸ್ ನೋಟ್ ನಲ್ಲಿ ಏನಿದೆ ಅಂತ ನೋಡೋದಾದ್ರೆ.
ಬಜೆಟ್ ಎಂಬುದು ಹಾಳೆಗಳ ಮೇಲಿನ ಲೆಕ್ಕವಲ್ಲ, ಜನರ ಭವಿಷ್ಯ ರೂಪಿಸುವ ಕೈಪಿಡಿ ; ಸಿಎಂ ಸಿದ್ದರಾಮಯ್ಯ
ಈ ಪ್ರಕರಣ ಕೇಳಿ ಪೋಷಕನಾಗಿ ನನ್ನ ಹೃದಯ ಒಡೆದು ಹೋಗಿದೆ, ನನಗೆ ಆಗಿರುವ ಅಘಾತವನ್ನ ಹೇಳಲು ಪದಗಳೇ ಸಿಗ್ತಿಲ್ಲ. ಇತ್ತಿಚಿನ ಬೆಳಗಣಿಗೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ತುಂಬಾ ಕಷ್ಟದ ಸಮಯ. ಇದನ್ನ ಎದುರಿಸಲು ನಾವು ಕಷ್ಟ ಪಡ್ತಾ ಇದ್ದೇವೆ. ರನ್ಯಾ ಹಾಗೂ ಜತಿನ್ ಹುಕ್ಕೇರಿ 2024 ರಲ್ಲಿ ಮದುವೆ ಆದ್ರು. ಮದುವೆ ಆದ ನಂತರ ಖಾಸಗಿತನ ಮತ್ತು ಸ್ವಾತ್ರಂತ್ರ್ಯವನ್ನ ಕಾಪಾಡಿಕೊಂಡಿದ್ದಾರೆ.
ನಮ್ಮ ಮನೆಗೆ ಬರುವುದನ್ನ ಆಕೆ ನಿಲ್ಲಿಸಿದ್ದಾಳೆ,ನಾವು ಭೇಟೆಯಾಗಲು ಅವಕಾಶ ನೀಡಿಲ್ಲ. ಇದರಿಂದ ನಮ್ಮ ಹಾಗೂ ಅವರ ನಡುವೆ ಅಂತರ ಬೆಳೆಯಿತು. ನಾನು ಕೆಲಸದಲ್ಲಿ ಪ್ರಾಮಾಣಿಕನಾಗಿದ್ದೇನೆ, ನನ್ನದೆ ಆದ ಶಿಸ್ತಿನ ಜೀವನ ನಡೆಸಿದ್ದೇನೆ.
ನಮ್ಮ ಕುಟುಂಬಕ್ಕೆ ಈ ಕಳಂಕ ಬಂದಿದೆ. ನಾನು ದುಃಖಿತ ತಂದೆ ಆಗಿದ್ದೇನೆ ಅಂತ ಕೇಳಿಕೊಳ್ತೇನೆ.
ನನ್ನ ಜೀವನದಲ್ಲಿ ಊಹೆಗೂ ನಿಲುಕದ ಈ ರೀತಿ ಘಟನೆ ನಡೆಯುತ್ತೆ ಅಂತ ಅಂದುಕೊಂಡಿರಲಿಲ್ಲ.
ರನ್ಯಾ ವಿಚಾರದಲ್ಲಿ ನಾನು ಕಾನೂನು ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳಲಿ ಎಂದು ಪತ್ರ ಮುಗಿಸಿದ್ದಾರೆ. ಆದ್ರೆ ಈ ಪತ್ರ ಯಾರು ಬರೆದಿದ್ದಾರೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಡಿಜಿಪಿ ರಾಮಚಂದ್ರರಾವ್ ಈ ಪತ್ರ ಬರೆದ್ರಾ? ಇಲ್ಲ ಅವ್ರ ಹೆಸ್ರಲ್ಲಿ ಬೇರೆ ಯಾರಾದ್ರೂ ಪತ್ರ ಬರೆದ್ರಾ ಅನ್ನೋಸು ನಿಗೂಢವಾಗಿದೆ.