ಬೆಂಗಳೂರು:- ಮಹಿಳೆಯ ಕಿಡ್ನ್ಯಾಪ್ ಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೆಚ್ ಡಿ ರೇವಣ್ಣ ಹೇಳಿದ್ದಾರೆ.
Breaking: ನಮ್ಮ ಗಮನಕ್ಕೆ ತರದೆ ಮಹಜರು ನಡೆಸಲಾಗುತ್ತಿದೆ: ರೇವಣ್ಣ ಪರ ವಕೀಲ ಆರೋಪ..!
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಮನೆಯಿಂದ ರೇವಣ್ಣರನ್ನು ಬಂಧಿಸಿದ್ದ ಎಸ್ಐಟಿ ನಿನ್ನೆ ಸಂಜೆ ಜಡ್ಜ್ ಎದುರು ಹಾಜರುಪಡಿಸಿತ್ತು. ಈ ವೇಳೆ ರಾಜಕೀಯ ಭವಿಷ್ಯವನ್ನು ನೆನಪಿಸಿಕೊಂಡು ರೇವಣ್ಣ ಕೈ ಮುಗಿದು ಕಣ್ಣೀರು ಹಾಕಿದ್ದರು. ರಾಜಕೀಯ ಷಡ್ಯಂತ್ರ ನಡೆಸಿ ನನ್ನ ಬಂಧನವಾಗಿದೆ ಅಂತ ಅಳಲು ತೋಡಿಕೊಂಡಿದ್ದರು. ಸದ್ಯ 4 ದಿನಗಳ ಕಾಲ ಎಸ್ಐಟಿ ಕಸ್ಟಡಿಯಲ್ಲಿರುವ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಮಹಿಳೆಯನ್ನು ಬಲವಂತವಾಗಿ ದೈಹಿಕವಾಗಿ ಬಳಸಿಕೊಂಡಿದ್ದರು ಎಂದು ಎಸ್ಐಟಿ ಹೇಳಿಕೆ ದಾಖಲಿಸಿಕೊಂಡಿದೆ. ಆದ್ರೆ, ಎಸ್ಐಟಿ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದ ರೇವಣ್ಣ, ಕಿಡ್ನ್ಯಾಪ್ಗೂ ನನಗೂ ಸಂಬಂಧವಿಲ್ಲ. ಕಿಡ್ನ್ಯಾಪ್ ಮಾಡಿ ಅಂತಾ ಯಾರಿಗೂ ಹೇಳಿಲ್ಲ ಅಂತಾ ಒಂದೇ ಉತ್ತರ ನೀಡಿದ್ದಾರೆ.
ಇಷ್ಟೇ ಅಲ್ಲ ನನಗೂ ಕಿಡ್ನ್ಯಾಪ್ಗೂ ಸಂಬಂಧವಿಲ್ಲ ಎಂದಿರುವ ರೇವಣ್ಣ, ಸ್ವಇಚ್ಛಾ ಹೇಳಿಕೆಗೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ