ಹುಬ್ಬಳ್ಳಿ : ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
DK Suresh: ಪಕ್ಷಕ್ಕೆ ನಾನು ಅನಿವಾರ್ಯ ಅಲ್ಲ: ಡಿಕೆ ಸುರೇಶ್ ಹಿಂಗೇಳಿದ್ಯಾಕೆ!?
ಈ ಸಂಬಂಧ ಮಾತನಾಡಿದ ಅವರು, ಬೆಂಗಳೂರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯ ಲಕ್ಷ್ಮೀ ಜೋಶಿ ಸಹಿತ ಮೂವರ ವಿರುದ್ಧಸುನೀತಾ ಚವ್ಹಾಣ್ ಎಂಬುವರು ನೀಡಿದ ದೂರಿನನ್ವಯ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
ದಾಖಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, “ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ.
ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ” ಎಂದು ಆರೋಪವನ್ನು ತಳ್ಳಿ ಹಾಕಿದರು.
ಸದ್ಯ 2012 ರಲ್ಲಿ ಪ್ರಹ್ಲಾದ ಜೋಶಿ ಅವರು ನೀಡಿದ್ದ ಪ್ರಕಟಣೆವೊಂದು ವೈರಲ್ ಆಗಿದೆ.
ನಮ್ಮ ಪಕ್ಷಗಾರರಾದ ಶ್ರೀ ಪ್ರಲ್ಲಾದ ವೆಂ. ಜೋಶಿ, ಸಂಸದರು. ಸಾ. ಹುಬ್ಬಳ್ಳಿ ಇವರು ನೀಡಿದ ಅಧಿಕಾರ ವ ಮಾಹಿತಿ ಮೇರೆಗೆ ಕೊಡುವ ಸಾರ್ವಜನಿಕ ಎಚ್ಚರಿಕೆ ನೋಟಿಸು ಏನೆಂದರೆ- ಯಾರಾದರೂ ನಮ್ಮ ಪಕ್ಷಗಾರರ ಹೆಸರಿನಲ್ಲಿ ತಾವು ಅವರ ಬಂಧುಗಳು, ಸಹೋದರರು, ಸ್ನೇಹಿತರು ಇತ್ಯಾದಿ ಎಂದು ಹೇಳಿಕೊಂಡು ಯಾವುದೇ ರೀತಿಯ
ಹಣಕಾಸಿನ ವ್ಯವಹಾರ ಮಾಡಿದಲ್ಲಿ ಅದು ನಮ್ಮ ಪಕ್ಷಗಾರರಿಗೆ ಸಂಬಂಧ ಇರುವುದಿಲ್ಲ ಹಾಗೂ ಬಂಧನಕಾರಿಯಾಗುವುದಿಲ್ಲ. ಎಂದು ನ್ಯಾಯವಾದಿ ಅರುಣ ಜೋಶಿ ಸಾರ್ವಜನಿಕ ಎಚ್ಚರಿಕೆ ನೋಟಿಸ್ ನೀಡಿದ್ದಾರೆ.
ಇದನ್ನು ತಿಳಿಯದ ಮೂಢರು ಅವರ ಹೆಸರು ಹಾಳು ಮಾಡುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ ಎಂದು 2012 ರಲ್ಲಿಯ ಜೋಶಿಯವರ ನೋಟಿಸ್ ವೈರಲ್ ಆಗುತ್ತಿದೆ.
ವರದಿ: ಮಾರುತಿ ಲಮಾಣಿ