ಚಿತ್ರದುರ್ಗ: ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ಬಿಟ್ರಾ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ.? ಹೌದು ಇಂತಹ ಒಂದು ಪ್ರಶ್ನೆ ಇಂದು ಅವರು ನಡೆಸಿದ ಸುದ್ದಿಗೊಷ್ಠಿಯಲ್ಲಿ ತಿಳಿದುಬಂದಿದೆ. ನಾನು ರಾಜಕೀಯದಿಂದ ದೂರ ಇರಲು ನಿರ್ಧಾರ ಮಾಡಿದ್ದೇನೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು,
ಭ್ರಷ್ಟ ರಾಜಕೀಯ ವ್ಯವಸ್ಥೆಯಿಂದ ದೂರ ಇರಲು ನಿರ್ಧಾರ ಮಾಡಿರುವೆ ಎಂದರು. ಇಂಥ ವ್ಯವಸ್ಥೆಯಲ್ಲಿ ಮುಂದುವರಿಯುವ ರಾಜಕಾರಣಿ ನಾನಲ್ಲ. ಭ್ರಷ್ಟಾಚಾರ ನನ್ನ ಕಣ್ಣಿಗೆ ಯಾವತ್ತೂ ಬಿತ್ತು, ಆ ಕುರ್ಚಿ ಪಕ್ಕ ಕೂಡಾ ಕುಳಿತುಕೊಳ್ಳಲ್ಲ ಎಂದು ಹೇಳಿದರು. ನಾನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ.
ನಾನು ಬಿಜೆಪಿ ಪಕ್ಷದ ಸೇನಾನಿ, ಪಕ್ಷ ಹೇಳಿದ್ದನ್ನ ಕೇಳುತ್ತೇನೆ. ಸ್ಪರ್ಧೆ ವಿಚಾರ ಪಕ್ಷ ನಿರ್ಧಾರವನ್ನ ಮಾಡುತ್ತದೆ ಎಂದು ಹೇಳಿದರು. ನಾನೇ ಕ್ಯಾಂಡಿಡೇಟ್ ಆಗಬೇಕು ಅಥವಾ ನನ್ನ ಮಕ್ಕಳು ಆಗಬೇಕು ಅನ್ನೋದಲ್ಲ. ಚಿತ್ರದುರ್ಗಕ್ಕೆ ನನ್ನ ಪಕ್ಷ ಹೇಳಿದ್ದಕ್ಕೆ ಸ್ಪರ್ಧೆ ಮಾಡಿದ್ದೆ. ಜನರು ಆಶೀರ್ವಾದ ಮಾಡಿ ಆಯ್ಕೆ ಮಾಡಿದ್ದರು. ಜನತೆ & ನಿರೀಕ್ಷೆಯಂತೆ ನಾನು ಕೆಲಸ ಮಾಡಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.