ಬೆಂಗಳೂರು: ಮಂಡ್ಯ ನಾಗಮಂಗಲದಲ್ಲಿ ಸಂಭವಿಸಿದ ಕೋಮು ಗಲಭೆ ಬಗ್ಗೆ ಬಿಜೆಪಿ ನಾಯಕರು ಒಬ್ಬರಾದ ಮೇಲೊಬ್ಬರಂತೆ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಎಲ್ಲರನ್ನೂ ಎ1 ಮಾಡಲು ಆಗುತ್ತಾ ಎಂದು ಕೃಷಿ ಸಚಿವ, ನಾಗಮಂಗಲ ಶಾಸಕ ಚಲುವರಾಯಸ್ವಾಮಿ ಪ್ರಶ್ನಿಸಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಾಗಮಂಗಲ ಗಲಭೆ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಗಣೇಶನನ್ನು ಕೂರಿಸಿದವರನ್ನು ಎ1 ಮಾಡಿದ್ದಾರೆ. ಎ1 ಆರೋಪಿಯನ್ನಾಗಿ ಒಬ್ಬರನ್ನೇ ಮಾಡಲು ಆಗುವುದು ಎಂದು ತಿಳಿಸಿದರು.
ರೈತ ಸಮುದಾಯಕ್ಕೆ ಗುಡ್ ನ್ಯೂಸ್: ಮಿನಿ ಟ್ರ್ಯಾಕ್ಟರ್ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!
ಸಿಸಿಟಿವಿ ವಿಡಿಯೋ ಗಮನಿಸಿ ಪೊಲೀಸರು ಎರಡು ಕೋಮಿನವರನ್ನ ಬಂಧಿಸಿದ್ದಾರೆ. ಒಂದು ವೇಳೆ ಬಂಧನಕ್ಕೆ ಒಳಗಾದವರು ಗಲಭೆಯಲ್ಲಿ ಭಾಗಿಯಾಗದೇ ಇದ್ದರೆ ಚಾರ್ಚ್ ಶೀಟ್ ಹಾಕುವಾಗ ಅವರ ಹೆಸರನ್ನ ತೆಗೆಯಬೇಕು ಎಂದು ಆದೇಶ ಮಾಡಿದ್ದೇವೆ ಎಂದರು.
ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರಿಗೆ ಸಂಸದರಾಗಿ ಏನು ಕೆಲಸ ಮಾಡಬೇಕು ಅದನ್ನು ಮಾಡುವುದಕ್ಕೆ ಹೇಳಿ. ಸುಮ್ನೆ ಏನೇನೋ ಮಾತನಾಡುತ್ತಾರೆ. ಅವರ ಹೇಳಿಕೆಗಳಿಗೆ ನಾನು ಉತ್ತರಿಸಬಾರದು ಅಂತಾ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.