ಕಿಚ್ಚನ ಜೊತೆಗಿನ ಸಂಗೀತಾ ಶೃಂಗೇರಿ ಸ್ಪೆಷಲ್ ಫೋಟೋ ಶೇರ್ ಮಾಡಿ ವಿಶೇಷ ಸಾಲುಗಳನ್ನು ಬರೆದಿದ್ದಾರೆ. ‘ನಮ್ಮ ಬಿಗ್ ಬಾಸ್ ನೀವೇ’ ಎಂದು ಸಂಗೀತಾ(Sangeetha Sringeri) ಹಾಡಿಹೊಗಳಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Kannada 10) ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. 2ನೇ ರನ್ನರ್ ಅಪ್ ಆಗಿ ಸಂಗೀತಾ ಸ್ಥಾನ ಪಡೆದಿದ್ದಾರೆ.
ಇದೀಗ ಕಿಚ್ಚನ ಬಗ್ಗೆ ವಿಶೇಷವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ನಮ್ಮ ಕರುನಾಡ ‘ಅಭಿನಯ ಚಕ್ರವರ್ತಿ’, ನಮ್ಮೆಲ್ಲರ ಪ್ರೀತಿಯಾ ಕಿಚ್ಚನಿಗೆ ನಾನು ಎಂದೆಂದೂ ಆಭಾರಿ. ಮೊದಲನೇ ವಾರದಿಂದ ಕೊನೆಯ ದಿನದವರೆಗೂ ಬಹಳ ಸೂಕ್ಷ್ಮತೆಯಿಂದ, ಕಾಳಜಿಯಿಂದ ಕಂಡಿರಿ, ತಿದ್ದಿ ಸರಿ ದಾರಿ ತೋರಿದಿರಿ.
https://www.facebook.com/photo?fbid=921427719352172&set=pcb.921427766018834
ನಮ್ಮ ಬಿಗ್ ಬಾಸ್ ನೀವೇ ಎಂದು ನಟಿ ಬರೆದಿದ್ದಾರೆ. ಕಷ್ಟಕರವಾದ ಬಿಗ್ ಬಾಸ್ ಜರ್ನಿಯನ್ನು ಅಡ್ವೆಂಚರ್ ಆಗಿ ಬದಲಾಯಿಸಿದ ಕಿಚ್ಚ ಅವರಿಗೆ ಧನ್ಯವಾದ. ನಿಮ್ಮ ನಿರೂಪಣೆ ಈ ಶೋವನ್ನು ಅದ್ಭುತವಾಗಿಸಿದೆ ಎಂದು ನಟಿ ಬರೆದಿದ್ದಾರೆ. ಫಿನಾಲೆ ದಿನ ಕಿಚ್ಚನ ಜೊತೆ ನಿಂತಿದ್ದ ಫೋಟೋಗಳನ್ನು ಶೇರ್ ಮಾಡಿದ್ದಾರೆ.