ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ಅಡ್ವಾಣಿ ಕಾರಣ.. ಅವರನ್ನೇ ಬರಬೇಡಿ ಎಂದಿದ್ದಾರೆ.. ಇನ್ನು ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಕೊಡ್ತಾರಾ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಿಡಿ ಕಾರಿದ್ರು.. ನಗರದಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣಕ್ಕೆ ಹತ್ತು ಲಕ್ಷ ಕೊಟ್ಟಿದ್ದೇನೆ.. ಆಗ ಅವರಿಗೆ ಎಲ್ಲಾರು ನೆನಪು ಆದ್ರು.. ಈಗಿಲ್ಲ ಎಂದ್ರು..
Sri Ram Mandir: ಅಯೋಧ್ಯೆ ಶ್ರೀರಾಮನ ಅಭಿಷೇಕಕ್ಕೆ ನೇಪಾಳದಿಂದ ಬರಲಿದೆ 16 ಪವಿತ್ರ ನದಿಗಳ ನೀರು..!
ರಾಜ್ಯದ ಸಿಎಂಗೆ ಆಹ್ವಾನ ನೀಡಿಲ್ಲ ಅಂದ್ರೆ ಅದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಸಚಿವರು ಹಿಗ್ಗಾಮುಗ್ಗ ವಾಗ್ದಾಳಿ ನಡೆಸ್ತಿದ್ದಾರೆ.. ರಾಮ ಯಾರೊಬ್ಬರ ಜಹಗೀರ್ ಅಲ್ಲ.. ಖಾಸಗಿ ಆಸ್ತಿನೂ ಅಲ್ಲ ಅಂತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.. ಭಾರತ್ ಮಾತಾಕಿ ಜೈ ಎಂದು ಅತ್ಯಾಚಾರ ಕೊಲೆ ಮಾಡಿದ್ರೆ, ಅದನ್ನ ಒಪ್ಪಿಕೊಳ್ಳೋದಕ್ಕೆ ಆಗುತ್ತಾ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ..