ಬೆಂಗಳೂರು: ನಾನೇ ನನ್ನ ಸ್ವಂತ ಶಕ್ತಿಯಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯಕ್ಕೆ ಬಂದಮೇಲೆ ಗಾಡ್ ಫಾದರ್ ಶುರುವಾದರು. ಈಗೀಗ ವಿಧಾನಪರಿಷತ್ ಗೌರವ ಕಡಿಮೆ ಆಗುತ್ತಿದೆ.
ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ. ಎಲ್ಲದ್ದಕ್ಕೂ ಬಾವಿಗೆ ಬಂದು ಇಳಿದು ಧಿಕ್ಕಾರ ಕೂಗುವ ಅಭ್ಯಾಸ ಶುರುವಾಗಿದೆ. ನಾವೆಲ್ಲ ಅಜೆಂಡಾ ಇಟ್ಟುಕೊಂಡು ಓದಿಕೊಂಡು ಬರುತ್ತಿದ್ದೆವು. ಈಗ ಪ್ರಶ್ನೆ ಕೇಳಿ ಎರಡು ನಿಮಿಷಕ್ಕೆ ಹೊರಗೆ ಹೋಗುತ್ತಾರೆ ಎಂದು ಹೊರಟ್ಟಿ ಹೇಳಿದ್ದಾರೆ.
Puri without using oil: ಎಣ್ಣೆ ಬಳಸದೇ ಆರೋಗ್ಯಕರ ಪೂರಿಗಳನ್ನು ತಯಾರಿಸಬಹುದು.! ಹೇಗೆ ಗೊತ್ತಾ..? ಇಲ್ಲಿದೆ ಟಿಪ್ಸ್
ಇನ್ನೂ ಈಗ ವಿಧಾನ ಪರಿಷತ್ ಅಂದ್ರೆ ಮುನಿಸಿಪಾಲಿಟಿ ಆಗಿದೆ. ನನಗೆ ಇದರ ಬಗ್ಗೆ ಸಾಕಷ್ಟು ನೋವು ಆಗಿದೆ. ರಾಜಕೀಯ ಪುಡಾರಿಗಳು ಯಾರು ಇರ್ತಾರೋ ಅವರನ್ನು ತಂದು ತಂದು ವಿಧಾನ ಪರಿಷತ್ಗೆ ಹಾಕ್ತಾರೆ. ಪರಿಷತ್ ನಿರಾಶ್ರಿತರ ಕೇಂದ್ರದ ರೀತಿ ಆಗಿದೆ. ಕಲಾಪಗಳು ಕಾಲಕ್ಕೆ ಸರಿಯಾಗಿ ನಡೆಯಲ್ಲ. ಶಿಕ್ಷಕರ ಮತದಾರ ಕ್ಷೇತ್ರದಿಂದಲೂ ದುಡ್ಡು ತಿಂದು ವೋಟ್ ಹಾಕಿಕೊಂಡು ಬಂದಿದ್ದಾರೆ ಎಂದರು.