ಬೆಂಗಳೂರು: ಗುಂಡು ಹೊಡೆದು ಸಾಯಿಸಲು ಪ್ಲಾನ್ ಮಾಡಿದ್ದರಾ ಅಂತ ನನಗೆ ಅನುಮಾನವಿದೆ ಎಂದು ಮಾಜಿ ಸಚಿವ, ಎಂಎಲ್ಸಿ ಸಿಟಿ ರವಿ ಹೇಳಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಗುಂಡು ಹೊಡೆದು ಸಾಯಿಸಲು ಪ್ಲಾನ್ ಮಾಡಿದ್ದರಾ ಅಂತ ನನಗೆ ಅನುಮಾನವಿದೆ.
ಏನೋ ಸಂಚು ಮಾಡಿದ್ದರು ಎಂಬ ಬಗ್ಗೆ ನನಗೆ ಅನುಮಾನ ಇದೆ. ಗೃಹ ಸಚಿವರ ಹಿಡಿತದಲ್ಲೇ ಗೃಹ ಇಲಾಖೆ ಇದೆಯಾ ಎಂಬ ಅನುಮಾನ ಇದೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಒತ್ತಾಯಿಸಿದರು.
PM Kisan: ಪಿಎಂ ಕಿಸಾನ್ 19ನೇ ಕಂತಿನ ಹಣ ರೈತರ ಖಾತೆಗೆ ಬರೋದು ಯಾವಾಗ ಗೊತ್ತಾ..? ಇಲ್ಲಿದೆ ಉತ್ತರ
ರಾತ್ರಿ ನನ್ನ ಅಂಕಲಗಿ ಠಾಣೆಗೆ ಕರೆದುಕೊಂಡು ಹೋದರು. ಆಗ ಏನಾದರೂ ತಿನ್ನಿ ಸಾರ್ ನಮ್ಮದು ಕರ್ಮದ ಜೀವನ, ತಿನ್ನಿ ಸಾರ್ ಎಂದರು. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಬಂದರು. ನಾನು ವೈದ್ಯರಿಗೆ ಪೆಟ್ಟು ಬಿದ್ದಿರುವ ಜಾಗ ತೋರಿಸಿದೆ. ಲಿವರ್ಗೆ ಸ್ವಲ್ಪ ಪೆಟ್ಟು ಬಿದ್ದಿದೆ ಸ್ಕ್ಯಾನಿಂಗ್ ಮಾಡೋಕೆ ವೈದ್ಯರು ಹೇಳಿದರು. ನಂತರ ನನ್ನ ಹೊರಗೆ ಕೂರಿಸಿ ಪೊಲೀಸರು ಒಳಗೆ ಹೋಗಿ ವೈದ್ಯರ ಜೊತೆಗೆ ಮಾತನಾಡಿದರು ಎಂದು ತಿಳಿಸಿದರು.