ನಿಮ್ಮ ಸಹವಾಸ ಸಾಕಾಗಿದೆ ಎಂದು ಹೇಳುವ ಮೂಲಕ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ನೇರವಾಗಿ ಹೇಳಿದ್ದಾರೆ.
ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ಫನ್ ಮೂಡ್ನಲ್ಲಿ ಇರುತ್ತಾರೆ. ಏನೇ ಹೇಳಿದರೂ ಅದನ್ನು ಫನ್ ಆಗಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಯಾರು ಹೊರ ಹೋಗುತ್ತಾರೆ ಎಂದು ಕೇಳುತ್ತಾ ಬರಲಾಯಿತು. ಆಗ ಎಲ್ಲರೂ ಫನ್ ಆಗಿ ಉತ್ತರ ಕೊಟ್ಟರು. ರಜತ್ ಅವರು ಸುದೀಪ್ನ ಹೊಗಳಿದರು. ಇದಕ್ಕೆ ಸುದೀಪ್ ಅವರು ನೇರ ಮಾತುಗಳಲ್ಲಿ ಕೌಂಟರ್ ಕೊಟ್ಟಿದ್ದಾರೆ.
ಯಾವ ಸೀಸನ್ನಲ್ಲೂ ಇಲ್ಲದಿರೋ ಕಳೆ ನಿಮಗೆ ಈ ಸೀಸನ್ನಲ್ಲಿ ಬಂದಿದೆ’ ಎಂದು ರಜತ್ ಅವರು ಸುದೀಪ್ ಬಳಿ ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್ ಅವರು, ‘ಯಾವ ಸೀಸನ್ನಲ್ಲೂ ಇಲ್ಲದಿರೋ ಕಳೆ ಈಗ ಯಾಕೆ ಬಂತು ಎಂದರೆ, ಈ ಸೀಸನ್ ಇನ್ನೊಂದು ವಾರ ಇದೆಯಲ್ಲ. ಅದಕ್ಕೆ ಕಳೆ ಬಂದಿದೆ. ನಿಮ್ಮ ಸಹವಾಸ ಸಾಕಾಗಿದೆ’ ಎಂದು ಸುದೀಪ್ ಹೇಳಿದ್ದಾರೆ.
ಈಗಾಗಲೇ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ನಿರ್ಧಾರ ಮಾಡಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ಕೂಡ ಮಾಡಿದ್ದಾರೆ. ಆದರೆ, ಕಲರ್ಸ್ ಕನ್ನಡ ಕಡೆಯಿಂದ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಯೋಚಿಸೋದಾಗಿ ಹೇಳಿದ್ದಾರೆ. ಅವರು ಮನಸ್ಸು ಬದಲಿಸಲಿ ಎಂದು ಫ್ಯಾನ್ಸ್ ಕೋರುತ್ತಾ ಇದ್ದಾರೆ