ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ನೇರ ಮಾತುಗಳಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಅದರಲ್ಲೂ ಹಲವು ಭಾರಿ ನಟಿ ಶ್ರೀದೇವಿಯನ್ನು ರಾಮ್ ಗೋಪಾಲ್ ವರ್ಮಾ ಹೊಗಳುತ್ತಿರುತ್ತಾರೆ. ಇದೀಗ ಶ್ರೀದೇವಿ ಪುತ್ರಿ ಜಾನ್ವಿ ಬಗ್ಗೆ ನೇರಾ ನೇರಾ ಮಾತನಾಡಿದ್ದು ‘ನನಗೆ ತಾಯಿ ಇಷ್ಟವೇ ಹೊರತು ಮಗಳಲ್ಲ’ ಎಂದಿದ್ದಾರೆ.
ರಾಮ್ ಗೋಪಾಲ್ ವರ್ಮಾಗೆ ಶ್ರೀದೇವಿ ಅವರನ್ನು ಕಂಡರೆ ವಿಶೇಷ ಪ್ರೀತಿ ಇತ್ತು. ಅವರನ್ನು ರಾಮ್ ಗೋಪಾಲ್ ವರ್ಮಾ ಆರಾಧಿಸುತ್ತಾ ಇದ್ದರು. ಈ ಬಗ್ಗೆ ಹಲವು ಬಾರಿ ಹೇಳಿದ್ದಾರೆ. ಕೆಲವರು ಮಕ್ಕಳಲ್ಲಿ ತಾಯಿಯನ್ನು ಕಾಣುತ್ತಾರೆ. ಆದರೆ ರಾಮ್ ಗೋಪಾಲ್ ವರ್ಮಾ ಆ ರೀತಿ ಅಲ್ಲವೇ ಅಲ್ಲ.
‘ನನಗೆ ಜಾನ್ವಿ ಕಪೂರ್ ಅವರಲ್ಲಿ ಶ್ರೀದೇವಿ ಕಾಣುತ್ತಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ.ಈ ಮೂಲಕ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ವಿಚಾರ ಸುಳ್ಳಾಗಿದೆ. ಈ ಮೊದಲು ಜೂನಿಯರ್ ಎನ್ ಟಿಆರ್ ಅವರು ಜಾನ್ವಿ ಕಪೂರ್ ಅವರನ್ನು ಶ್ರೀದೇವಿಗೆ ಹೋಲಿಕೆ ಮಾಡಿದ್ದರು. ಆದರೆ, ಹೋಲಿಕೆ ತಪ್ಪು ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
‘ಶ್ರೀದೇವಿ ಅವರನ್ನು ಆರಾಧಿಸುವವರು ಹೆಚ್ಚಿದರು ಕಾರಣ ಅವರ ನಟನೆ ಹಾಗೂ ಕಲೆಯಿಂದ. ಅವರು ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅವರ ಪರ್ಫಾರ್ಮೆನ್ಸ್ ನೋಡಿ ನಾನೊಬ್ಬ ನಿರ್ದೇಶಕ ಅನ್ನೋದು ನನಗೆ ಮರೆತೇ ಹೋಯಿತು. ನಾನು ಅವಳ ಪ್ರೇಕ್ಷಕನಾಗಿ ನೋಡಲು ಆರಂಭಿಸಿದೆ. ಇದು ಅವರ ರೇಂಜ್’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
‘ನನಗೆ ಅವಳ ಅಮ್ಮ ಇಷ್ಟ, ಮಗಳಲ್ಲ. ಜಾನ್ವಿ ಜೊತೆ ಸಿನಿಮಾ ಮಾಡುವ ಯಾವುದೇ ಉದ್ದೇಶ ನನಗೆ ಇಲ್ಲ ಇಂಡಸ್ಟ್ರಿಯಲ್ಲಿ ಅನೇಕರ ಜೊತೆ ನಾನು ಕನೆಕ್ಷನ್ ಬೆರೆಸಿಕೊಂಡಿಲ್ಲ. ಹೀಗಾಗಿ,’ ಎಂದಿದ್ದಾರೆ.