ಹುಬ್ಬಳ್ಳಿ : ಭಾರತೀಯ ಜನತಾ ಪಕ್ಷಕ್ಕೆ ಮರಳಿ ಬಂದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಏನೇನು ಬೇಡಿಕೆ ಇಟ್ಟಿದ್ದಾರೋ ಗೊತ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.ನಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡೇ ಶೆಟ್ಟರ್ ರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ
ಹೈಕಮಾಂಡ್ ಜಗದೀಶ ಶೆಟ್ಟರನ್ನು ಪಕ್ಷಕ್ಕೆ ಬರಮಾಡಿಕೊಂಡಿದೆಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಸ್ವಾಗತ ಮಾಡ್ತೇವೆ ಜಗದೀಶ್ಶೆಟ್ಟರ್ ಎಲ್ಲಿಂದ ಸ್ಪರ್ಧೆ ಮಾಡ್ತಾರೆ ಅದನ್ನ ವರಿಷ್ಠರು ತೀರ್ಮಾನ ಮಾಡ್ತಾರೆ
ಅದಕ್ಕೆ ನಾವು ಬದ್ದರಿದ್ದೇವೆಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬರಬೇಕು ಅಂದ್ರೆ ರಾಜೀನಾಮೆ ಕೊಡಲೇ ಬೇಕು ಎಂದರು. ಹೈಕಮಾಂಡ್ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆಸುಕೊಂಡಿಲ್ಲ ಎಂಬ ವಿಚಾರ ಕುರಿತು ಸಹ ಮಾತನಾಡಿದ ಅವರು
ನಾಲ್ಕು ಚೌಕಟ್ಟಿನ ನಡೆಯುವ ಸಂಧಾನ ಇದುಮಾತುಕತೆ ನಡೀತಾ ಇರುತ್ತೆ ಅವುಗಳನ್ನು ಬಹಿರಂಗ ಪಡಿಸಲಾಗೋದಿಲ್ಲ ಎಂದರು.
ಇನ್ನು ಕೇಂದ್ರ ಸಚಿವ ಪ್ರಲ್ಹಾದ್ಜೋಶಿ ಅವರು ಜಗದೀಶ್ ಶೆಟ್ಟರ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗುವ ಮುನ್ನ ಭಾಗಿಯಾಗದ ಕುರಿತು ಮಾತನಾಡಿದ ಅವರುಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಪಕ್ಷ ನಿರ್ಧಾರ ಮಾಡಿರುತ್ತೆ ಎಂದರು.
ತಮ್ಮ ಕುರಿತು ಶೆಟ್ಟರ್ ಅಸಮಾಧಾನ ವಿಚಾರ ಪಕ್ಷದಲ್ಲಿದ್ದಾಗ ಅಂತಹದ್ಯಾವುದು ಇರಲ್ಲಕಾಂಗ್ರೆಸ್ ನಲ್ಲಿದ್ದಾಗ ಬಿಜೆಪಿ ಕಾಂಗ್ರೆಸ್ ಟೀಕೆ ಮಾಡೋದು ಸಹಜಈಗ ಪಕ್ಷಕ್ಕೆ ಸೇರಿದ್ದಾರೆ ಎಲ್ಲರೂ ಕೂಡಿ ಇರ್ತೇವೆ ಈಗ ನಾವೇನು ಹೇಳುವಂಥದಿಲ್ಲ, ಅವರನ್ನೇ ಕೇಳ್ಬೇಕು ಎಂದರು