ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗೆ ಬ್ರೇಕ್ ಹಾಕುವ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಇಲ್ಲಿಯವರೆಗೆ ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗುವನಲ್ಲ, ಹುಡುಕಿಕೊಂಡು ಹೋದರೂ ಸಿಗುವ ಸ್ಥಾನ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಟ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಕೇಸ್: ನಟಿ ಶಿಲ್ಪಾ ಶೆಟ್ಟಿ ಹೇಳಿದ್ದೇನು?
ಈ ಬಗ್ಗೆ ಮಾತನಾಡಿದ ಅವರು, ಇಲ್ಲಿಯ ನನ್ನ ಕೆಲಸ ಗುಣ ,ಸಂಘಟನೆ ನೋಡಿ ಪಾರ್ಟಿಯಿಂದ ಆಫರ್ ಮಾಡುತ್ತಿದ್ದರು, ನನಗೆಯೇ ಹುಡುಕಿ ಹೋಗಿಲ್ಲ, ಹುಡುಕಿಕೊಂಡು ಹೋದರು ಸಿಗುವ ಸ್ಥಾನವಿಲ್ಲ, ಯಾರಿಗೇ ಆದ್ರೂ ಆಫರ್ ಮಾಡಬೇಕು ನಾವಾಗೆ ಹೋದರೆ ಸಿಗಲ್ಲ ಎಂದು ಟೀಕಿಸಿದರು.
ನಮ್ಮ ಪಕ್ಷದಲ್ಲಿ ಆಕಾಂಕ್ಷಿಯಾರಲ್ಲಿ ನಾಯಕತ್ವ ಗುಣ ,ಸಂಘಟನೆ ನೋಡಿ ಪಾರ್ಟಿಯಲ್ಲಿ ಆಫರ್ ಮಾಡ್ತಾರೆ, ಬೇರೆ ಪಾರ್ಟಿಗಳಲ್ಲಿ ಗೊತ್ತಿಲ್ಲ, ಒಂದು ವೇಳೆ ಸ್ಥಾನ ಸಿಗದಿದ್ದರೆ ಆತನಲ್ಲಿ ಏನೋ ಸಮಸ್ಯೆ ಇದೇ ಎಂದರ್ಥ, ಹೀಗಾಗಿ ನಾವಾಗೆ ಅಧಿಕಾರ ಕೇಳಿಕೊಂಡು ಹೋಗಬಾರದು ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.
ಪಕ್ಷದಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲು ಗಾಂಧಿ,ನೆಹರೂ, ಇಂದಿರಾ ಗಾಂಧಿ ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕುಳಿತಿದ್ದಾರೆ. ಅವರಿಗೆ ಕಣ್ಣು,ಕಿವಿ ಇದೆ, ಎಲ್ಲ ವಿಚಾರ ಗೊತ್ತಿದೆ ಜೊತೆಗೆ ಬ್ಲಾಕ್ ಅಧ್ಯಕ್ಷರಿಂದ ಹಿಡಿದು ರಾಷ್ಟ್ರದ ಅಧ್ಯಕ್ಷರಾಗಿ ಕುಳಿತಿದ್ದಾರೆ ಇದೆಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ ಎಂದು ಡಿಕೆಶಿ ಹೇಳಿದರು.
ಇದೇ ವೇಳೆ ಯುಸ್ ಕಾನ್ಸುಲೇಟ್ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರು ಕೇವಲ ಪಾಸ್ ಪೋರ್ಟ್, ವೀಸಾ ವಿಚಾರವಲ್ಲ, ಇಲ್ಲಿ ಅತ್ಯುತ್ತಮ ವಿದ್ಯಾಭ್ಯಾಸ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ,ಬ್ಯಾಂಕಿಂಗ್ ಎಲ್ಲವೂ ಅತ್ಯುತ್ತಮವಾಗಿದೆ. ಎಲ್ಲದಿಕ್ಕಿಂತ ಹೆಚ್ಚಾಗಿ ಶಾಂತಿ ಇದೆ ಎಂದರು.
ಕಾನ್ಸುಲೇಟ್ ಇಡೀ ದೇಶಕ್ಕೆ ಬೆಂಗಳೂರಿನ ಮೂಲಕ ಸೇತುವೆ ಆಗುತ್ತಿದೆ, ಯುಸ್ ಕಾನ್ಸುಲೇಟ್ ನಿಂದ ಬೆಂಗಳೂರ ಗರಿಮೆ ಇನ್ನಷ್ಟು ಹೆಚ್ಚಾಗಿದೆ. ಒಟ್ಟಿನಲ್ಲಿ ಬೆಂಗಳೂರಿಗೆ ದೊಡ್ಡ ಭವಿಷ್ಯ ಇದೆ. ಇವೆಲ್ಲ ಬ್ರಾಂಡ್ ಬೆಂಗಳೂರು, ಬ್ರಾಂಡ್ ಕರ್ನಾಟಕ, ಬ್ರಾಂಡ್ ಇಂಡಿಯಾದ ಅಡಿಪಾಯ ಎಂದು ಡಿಕೆ ಶಿವಕುಮಾರ್ ಹೇಳಿದರು.