ನವದೆಹಲಿ:- ಮೋದಿ ಬದಲು ನೀವೇ ಪ್ರಧಾನಿಯಾಗಿ ಎಂದು ಲೋಕಸಭೆ ಚುನಾವಣೆಗೆ ಮೊದಲು ಗಡ್ಕರಿಗೆ ವಿಪಕ್ಷಗಳು ಆಫರ್ ಕೊಟ್ಟಿದ್ದರು.
ಡಿನೋಟಿಫಿಕೇಷನ್ ಕೇಸ್: 1 ಗಂಟೆ ಲೋಕಾಯುಕ್ತ ವಿಚಾರಣೆ ಎದುರಿಸಿದ ಸಚಿವ HDK
ಮೋದಿ ಬದಲು ನೀವೇ ಪ್ರಧಾನಿ ಆಗಿ. ನಮ್ಮ ಬೆಂಬಲ ನಿಮಗೆ ಇರುತ್ತದೆ ಎಂದು ಲೋಕಸಭೆ ಚುನಾವಣೆಗೆ ಮೊದಲು ಮತ್ತು ನಂತರ ವಿಪಕ್ಷಗಳು ತಮಗೆ ಆಫರ್ ನೀಡಿದ್ದವು. ಆದರೆ ಪಕ್ಷದ ಹಿತದೃಷ್ಟಿಯಿಂದ ನಾನು ಇದಕ್ಕೆ ಒಪ್ಪಲಿಲ್ಲ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮೋದಿ ಬದಲು ನಾನು ಪ್ರಧಾನಿ ಅಭ್ಯರ್ಥಿ ಆಗಿದ್ದರೆ ಬಿಜೆಪಿಯಲ್ಲಿ ಬಿರುಕು ಮೂಡುತ್ತಿತ್ತು. ಇದುವೇ ವಿಪಕ್ಷಗಳ ಉದ್ದೇಶ ಆಗಿತ್ತು. ಆದರೆ ಇದಕ್ಕೆ ನಾನು ಅವಕಾಶ ನೀಡಬಾರದು ಎನ್ನುವ ದೃಷ್ಟಿಯಿಂದ ವಿಪಕ್ಷಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದಿದ್ದಾರೆ.
ಮೋದಿ ಆಡಳಿತದಲ್ಲಿ ನನಗೆ ನೀಡಲಾದ ಜವಾಬ್ದಾರಿಗಳ ಬಗ್ಗೆ ನಾನು ಸಂತೃಪ್ತನಾಗಿದ್ದೇನೆ. ನನಗೆ ಪ್ರಧಾನಿ ಹುದ್ದೆ ಮೇಲೆ ಆಸೆ ಇಲ್ಲ. ನಾನು ಮೊದಲು ಸಂಘದ ಸದಸ್ಯ. ನಂತರ ಪಕ್ಷದ ಕಾರ್ಯಕರ್ತ. ನನಗೆ ಅಧಿಕಾರ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ನಿತಿನ್ ಗಡ್ಕರಿ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿವೆ.
.