ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ನೋಡುತ್ತಿದ್ದ ಕಾರಣ ಇತ್ತೀಚೆಗೆ ಅಂತ್ಯವಾಗಿದ್ದ ಭಾರತ ಹಾಗೂ ಶ್ರೀಲಂಕಾ ನಡುವಣ ವೈಟ್ ಸರಣಿಗಳನ್ನು ನೋಡಿರಲಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ಇದೇ ಅವಧಿಯಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮೊದಲು ಟಿ20 ಸರಣಿ ಹಾಗೂ ನಂತರ ಮೂರು ಪಂದ್ಯಗಳ ಒಡಿಐ ಸರಣಿಯವನ್ನು ಆಡಿದ್ದವು. ಟಿ20 ಸರಣಿಯನ್ನು ಭಾರತ ಗೆದ್ದಿದ್ದರೆ, ಏಕದಿನ ಸರಣಿಯನ್ನು ಶ್ರೀಲಂಕಾ ಗೆದ್ದಿತ್ತು.
Duleep Trophy: ದೇಶಿ ಕ್ರಿಕೆಟ್ ಆಡಲು ಸಜ್ಜಾಗುತ್ತಿರುವ ಸ್ಟಾರ್ ಆಟಗಾರರು
2-0 ಅಂತರದಲ್ಲಿ ಶ್ರೀಲಂಕಾ ಗೆಲುವು ಪಡೆದಿತ್ತು. ಆ ಮೂಲಕ 27 ವರ್ಷಗಳ ಬಳಿಕ ಭಾರತದ ವಿರುದ್ದ ಶ್ರೀಲಂಕಾ ತಂಡ ಒಡಿಐ ಸರಣಿ ಗೆದ್ದಿತ್ತು. ಇದೇ ಸಂದರ್ಭದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆದಿತ್ತು. ಒಲಿಂಪಿಕ್ಸ್ ಕ್ರೀಡಾಕೂಟ ನೋಡುತ್ತಿದ್ದ ಕಾರಣ ಕ್ರಿಕೆಟ್ ಸರಣಿ ನೋಡಲು ಸಾಧ್ಯವಾಗಿರಲಿಲ್ಲ ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
“ಪ್ರಾಮಾಣಿಕವಾಗಿ ಹೇಳಬೇಕೆಂದರೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನೋಡುತ್ತಿದ್ದ ಕಾರಣ ಭಾರತ ಹಾಗೂ ಶ್ರೀಲಂಕಾ ನಡುವಣ ಸರಣಿಯಲ್ಲಿ ಒಂದೇ ಒಂದು ಎಸೆತವನ್ನು ಕೂಡ ನಾನು ನೋಡಲಿಲ್ಲ. ಒಲಿಂಪಿಕ್ಸ್ ನಡೆಯುತ್ತಿರುವ ಸಂದರ್ಭದಲ್ಲಿ ಬೇರೆ ಯಾವುದೇ ಕ್ರೀಡೆ ನಡೆಯುತ್ತಿದ್ದರೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ,” ಎಂದು ಹರ್ಭಜನ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.