ಬೆಂಗಳೂರು : ಇಲ್ಲಿಯವರೆಗೆ ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗುವನಲ್ಲ, ಹುಡುಕಿಕೊಂಡು ಹೋದರೂ ಸಿಗುವ ಸ್ಥಾನ ಅಲ್ಲ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು.
ಸಾಲು ಸಾಲು ಸೋಲು: ಪ್ರವಾಸದ ವೇಳೆ ಕುಟುಂಬದ ಜೊತೆ ಪ್ರಯಾಣಿಸುವಂತಿಲ್ಲ – ಹೊಸ ರೂಲ್ಸ್ ತಂದ BCCI
ಈ ಬಗ್ಗೆ ಮಾತನಾಡಿದ ಅವರು, ಇಲ್ಲಿಯ ನನ್ನ ಕೆಲಸ ಗುಣ ,ಸಂಘಟನೆ ನೋಡಿ ಪಾರ್ಟಿಯಿಂದ ಆಫರ್ ಮಾಡುತ್ತಿದ್ದರು, ನನಗೆಯೇ ಹುಡುಕಿ ಹೋಗಿಲ್ಲ, ಹುಡುಕಿಕೊಂಡು ಹೋದರು ಸಿಗುವ ಸ್ಥಾನವಿಲ್ಲ, ಯಾರಿಗೇ ಆದ್ರೂ ಆಫರ್ ಮಾಡಬೇಕು ನಾವಾಗೆ ಹೋದರೆ ಸಿಗಲ್ಲ ಎಂದು ಟೀಕಿಸಿದರು.
ನಮ್ಮ ಪಕ್ಷದಲ್ಲಿ ಆಕಾಂಕ್ಷಿಯಾರಲ್ಲಿ ನಾಯಕತ್ವ ಗುಣ ,ಸಂಘಟನೆ ನೋಡಿ ಪಾರ್ಟಿಯಲ್ಲಿ ಆಫರ್ ಮಾಡ್ತಾರೆ, ಬೇರೆ ಪಾರ್ಟಿಗಳಲ್ಲಿ ಗೊತ್ತಿಲ್ಲ, ಒಂದು ವೇಳೆ ಸ್ಥಾನ ಸಿಗದಿದ್ದರೆ ಆತನಲ್ಲಿ ಏನೋ ಸಮಸ್ಯೆ ಇದೇ ಎಂದರ್ಥ, ಹೀಗಾಗಿ ನಾವಾಗೆ ಅಧಿಕಾರ ಕೇಳಿಕೊಂಡು ಹೋಗಬಾರದು ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.
ಪಕ್ಷದಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲು ಗಾಂಧಿ,ನೆಹರೂ, ಇಂದಿರಾ ಗಾಂಧಿ ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕುಳಿತಿದ್ದಾರೆ. ಅವರಿಗೆ ಕಣ್ಣು,ಕಿವಿ ಇದೆ, ಎಲ್ಲ ವಿಚಾರ ಗೊತ್ತಿದೆ ಜೊತೆಗೆ ಬ್ಲಾಕ್ ಅಧ್ಯಕ್ಷರಿಂದ ಹಿಡಿದು ರಾಷ್ಟ್ರದ ಅಧ್ಯಕ್ಷರಾಗಿ ಕುಳಿತಿದ್ದಾರೆ ಇದೆಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ ಎಂದು ಡಿಕೆಶಿ ಹೇಳಿದರು.