ನವದೆಹಲಿ:– 2024ರ ಲೋಕಸಭಾ ಚುನಾವಣೆ ಧರ್ಮ ಯುದ್ಧ ಇದ್ದಂತೆ ಎಂದು ಡಾ.ಮಂಜುನಾಥ್ ಹೇಳಿದ್ದಾರೆ.
ದೆಹಲಿಯಲ್ಲಿ ಅಮಿತ್ ಶಾರನ್ನು ಭೇಟಿಯಾಗಿ ಮಾತನಾಡಿದ ಅವರು, ‘ ಇದೊಂದು ಸೌಹಾರ್ದಯುತ ಭೇಟಿಯಾಗಿದೆ. ಇದುವರೆಗೂ ನಾನು ಅಮಿತ್ ಶಾರನ್ನು ನೋಡಿರಲಿಲ್ಲ. ಇಂದು(ಮಾ.16) ಭೇಟಿಯಾಗಿ ಲೋಕಸಭಾ ಚುನಾವಣೆಗೆ ಅವರ ಸಹಕಾರ ಕೇಳಿದ್ದೇನೆ ಎಂದರು.
ಸೋಮವಾರ(ಮಾ.18)ದಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರುತಿದ್ದೇನೆ. ವೈಯಕ್ತಿಕವಾಗಿ ಯಾರನ್ನೂ ಟೀಕಿಸಲ್ಲ, ಇದೊಂದು ಧರ್ಮಯುದ್ಧ ಇದ್ದಂತೆ. ಜಿಡಿಎಸ್ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೋದಲೆಲ್ಲಾ ಪಾಸಿಟಿವ್ ಪ್ರತಿಕ್ರಿಯೆ ಬರುತ್ತಿದೆ ಎಂದು ದೆಹಲಿಯಲ್ಲಿ ಡಾ. ಮಂಜುನಾಥ್ ಹೇಳಿದರು.