ಬಿಗ್ ಬಾಸ್ ಮನೆಯ(Bigg Boss Kannada 10) ಆಟ 8ನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ರೋಚಕ ಹಂತ ತಲುಪುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಾಂಪಿಟೇಷನ್ ಕೂಡ ಜೋರಾಗಿದೆ. ಹೀಗಿರುವಾಗ ಕಿಚ್ಚನ ಪಂಚಾಯಿತಿಯಲ್ಲಿ, ನಾನು ತಲೆ ಬೊಳಿಸಿದ ಮೇಲೆ ಪಾಪ್ಯುಲರ್ ಆಗಿದ್ದು, ಎಂದು ತುಕಾಲಿ- ಕಾರ್ತಿಕ್ ಗೆ(Karthik Mahesh) ಕಿವಿ ಮಾತು ಹೇಳಿದ್ದಾರೆ.
ಈಗ ವಾತವರಣವೇ ಬದಲಾಗಿದೆ. ಈ ವಾರ ಟಾಸ್ಕ್ ಮಾಡುವಾಗಲೇ ಬಿಗ್ ಬಾಸ್ ಎರಡು ತಂಡಗಳಾಗಿ ವಿಂಗಡಿಸಿದ್ರು. ಸಂಪತ್ತಿಗೆ ಸವಾಲ್ ಮತ್ತು ಗಜಕೇಸರಿ ಎಂಬ ಹೆಸರನ್ನ ತಂಡಕ್ಕೆ ಇಟ್ಟು ಮೈಕಲ್ & ಸಂಗೀತಾರನ್ನ ಮಾಡಲಾಗಿತ್ತು. ಎದುರಾಳಿ ತಂಡಕ್ಕೆ ಚಾಲೆಂಜ್ ಕೊಡುವ ಟಾಸ್ಕ್ ನಲ್ಲಿ ಹೆಡ್ ಶೇವ್ ಮಾಡುವ ಚಾಲೆಂಜ್ ಅನ್ನ ಕಾರ್ತಿಕ್ – ತುಕಾಲಿಗೆ ನೀಡಿದ್ರು. ಅದನ್ನ ಚಾಲೆಂಜ್ ಆಗಿ ತೆಗೆದುಕೊಂಡು ಸಿನಿಮಾ ಅವಕಾಶಗಳು ಕೈಯಲ್ಲಿದ್ರು ತುಕಾಲಿ ಸಂತು ಹಾಗೂ ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡರು. ಚಾಲೆಂಜ್ನ ಸ್ವೀಕರಿಸಿ ಕಂಪ್ಲೀಟ್ ಹೆಡ್ ಶೇವ್ ಮಾಡಿದರು. ಇದೇ ವಿಚಾರದ ಕುರಿತಾಗಿ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮಾತಿಗಿಳಿದರು. ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದ ಎಂದು ಕಿಚ್ಚ ಸುದೀಪ್ (Kichcha Sudeep) ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿದ್ದಾರೆ.
ಓಂ ಪ್ರಕಾಶ್ ರಾವ್ ನಿರ್ದೇಶನದ ‘ಹುಚ್ಚ’ ಸಿನಿಮಾಗಾಗಿ ತಾವು ಹೆಡ್ ಶೇವ್ ಮಾಡಿಕೊಂಡಿದ್ದನ್ನ ನೆನೆದು ಬಿಗ್ ಬಾಸ್ ಕನ್ನಡ 10 ವೇದಿಕೆ ಮೇಲೆ ನಾನೂ ತಲೆ ಬೋಳಿಸಿದ್ಮೇಲೆ ನಾನು ಪಾಪ್ಯುಲರ್ ಆಗಿದ್ದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ತುಕಾಲಿ ಸಂತು ಹಾಗೂ ಕಾರ್ತಿಕ್ ಮಹೇಶ್ ಜೊತೆಗೆ ಮಾತಿಗಿಳಿದ ಸುದೀಪ್, ಹೇಗಿದೆ ಹವಾಮಾನ ಎಂದು ಪ್ರಶ್ನಿಸಿದರು. ಚೆನ್ನಾಗಿದೆ. ಡಿಫರೆಂಟ್ ಆಗಿದೆ ಎಂದು ಕಾರ್ತಿಕ್ ಮಹೇಶ್ ಹೇಳಿದರು. ಆಗ, ತಲೆ ತುಂಬಾ ತಂಪಾಗಿ ಇರಬೇಕಲ್ವಾ. ಎಂದು ಸುದೀಪ್ ಕೇಳಿದಾಗ, ಹೌದು ನನಗಂತೂ ಈ ವಾರ ತುಂಬಾ ಡಿಫರೆಂಟ್ ಆಗಿತ್ತು. ಮರೆಯುವ ಹಾಗೇ ಇಲ್ಲ. ನನ್ನದು ಸಿನಿಮಾ ಕಮಿಟ್ಮೆಂಟ್ ಇತ್ತು ಎನ್ನುತ್ತಾರೆ ತುಕಾಲಿ ಸಂತು
ಈ ವೇಳೆ, ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದು ರೀ ಅಂತ ಸುದೀಪ್ ಹೇಳಿದಾಗ ನೆರೆದಿದ್ದ ವೀಕ್ಷಕರು ಚಪ್ಪಾಳೆ ತಟ್ಟುತ್ತಾರೆ. ಬಹಳ ಲಕ್ ಆಗಿ ನಿಮ್ಮಿಬ್ಬರ ಹತ್ತಿರ ಬಂದಿದೆ ಅಂದುಕೊಳ್ಳಿ ಎಂದು ಸುದೀಪ್ ಹೇಳಿದಾಗ ಹೌದು ಸರ್ ಅಂತಾರೆ ಕಾರ್ತಿಕ್ ಮಹೇಶ್ ಮತ್ತು ತುಕಾಲಿ ಸಂತು. ಇದಾದ ಬಳಿಕ ಮತ್ತೆ ಎದುರಾಳಿ ತಂಡಕ್ಕೆ ಸಂಗೀತಾ ಕ್ಯಾಪ್ಟನ್ ಆಗ್ತಾರೆ. ತಲೆ ಬೋಳಿಸಿಕೊಳ್ಳುವ ಸವಾಲು ಹಾಕ್ತಾರೆ ಆಗ ಏನ್ನನ್ನಿಸಿತು ಎಂದು ತುಕಾಲಿ, ಕಾರ್ತಿಕ್ ಗೆ ಕೇಳುತ್ತಾರೆ. ಎರಡು ನಿಮಿಷ ಟೈಮ್ ಕೊಟ್ಟಿದ್ದರು. ನನ್ನ ಟೀಮ್ಗೋಸ್ಕರ ಈ ತರಹ ಒಂದು ಮಾಡಿದರೆ, ಮುಂದೆ ಟೀಮ್ನವರೂ ಮೋಟಿವೇಟ್ ಆಗ್ತಾರೆ ಅನಿಸ್ತು. ಕೂದಲು ತಾನೇ ಪರ್ವಾಗಿಲ್ಲ ಅಂತ ಕೊಟ್ಟೆ ಸರ್.