ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್ಗಳನ್ನ ನೀಡಲಾಗುತ್ತದೆ ನೆನ್ನೆ ಸಹ ಇಂತಹದ್ದೇ ಟಾಸ್ಕ್ ಆಡಿಸಲಾಗಿತ್ತು.ಯಾರು ಬುದ್ಧಿವಂತರು ಎಂದು ಮನೆಯಲ್ಲಿ ಅಂದುಕೊಂಡಿದ್ದಾರೆ ಹಾಗೂ ಯಾರು ಯಾರ ಸ್ನೇಹವನ್ನು ಬಯಸುವುದಿಲ್ಲ ಹೀಗೆ ಹಲವಾರು ಪ್ರಶ್ನೆಗಳನ್ನ ಕೇಳಲಾಗಿತ್ತು ಇಂದು ಸಹ ಅಂತಹದ್ದೇ ಟಾಸ್ಕನ್ನು ಬಿಗ್ ಬಾಸ್ ಮನೆಯಲ್ಲಿ ಆಡಿಸಲಾಗಿದೆ.
ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಇದರ ಸ್ಪರ್ಧಿಗಳ ಮೇಲೆ ಯಾವ ರೀತಿ ಅಭಿಪ್ರಾಯವಿದೆ ಎಂಬುದನ್ನು ಹೊರಹಾಕಬಹುದು ಎಂಬ ದೃಷ್ಟಿಕೋನದಿಂದ ಈ ತರಹದ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಇವತ್ತು ಸಹ ವಿನಯ್ ಮೇಲೆ ಸಂಗೀತಾಗೆ ಯಾವ ಅಭಿಪ್ರಾಯವಿದೆ ಹಾಗೂ ಸಂಗೀತ ಮೇಲೆ ವಿನಯ್ ಗೆ ಯಾವ ಅಭಿಪ್ರಾಯವಿದೆ ಎಂಬುವುದು ಗೊತ್ತಾಗಿದೆ.
ಬಿಗ್ ಬಾಸ್ನಲ್ಲಿ (Bigg Boss) ಈ ವಾರ ಎರಡು ತಂಡಗಳನ್ನಾಗಿ ಮಾಡಲಾಗಿದೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಗಂಧರ್ವರು ಒಂದು ಕಡೆ ಹಾಗೂ ರಾಕ್ಷಸರು ಇನ್ನೊಂದು ಕಡೆ. ಇವರ ಮಧ್ಯೆ ಟಾಸ್ಕ್ ನಡೆಯಲಿದೆ. ಈ ಗ್ರೂಪ್ನ ಆಯ್ಕೆ ಮಾಡಲು ಬಿಗ್ ಬಾಸ್ ಬೇರೆಯದೇ ಆದ ತಂತ್ರ ಉಪಯೋಗಿಸಿತ್ತು. ಯಾರಲ್ಲಿ ಕೆಟ್ಟತನ ಹಾಗೂ ಯಾರಲ್ಲಿ ಒಳ್ಳೆಯ ತನ ಇದೆ ಎಂಬುದನ್ನು ಹೇಳಬೇಕು. ವಿನಯ್ ಕೆಟ್ಟ ಗುಣಗಳ ಬೇರು ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಬಗ್ಗೆ ಇದೇ ಆರೋಪವನ್ನು ವಿನಯ್ ಮಾಡಿದ್ದಾರೆ. ಸಂಗೀತಾಗೆ ಶಟ್ಅಪ್ ಎಂದು ಬೈದಿದ್ದಾರೆ.