ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಬ್ಯಾಲೆನ್ಸ್ ತಪ್ಪಿದೆ. ಹೀಗಾಗಲೇ ಅವರಲ್ಲೇ ಒಳಜಗಳ ಶುರುವಾಗಿವೆ. ಕಾಂಗ್ರೆಸ್ ನಾಯಕರಿಗೆ ರೈತರ ಏಳಿಗೆ, ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಕೃಷಿ ಸಚಿವ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ ಸಿ ಪಾಟೀಲ್, ಸಿದ್ದರಾಮಯ್ಯ ಮೊದಲು ಐದು ವರ್ಷ ಸಿಎಂ ನಾನೆ ಅಂತಾರೆ, ಆಮೇಲೆ ಮಾಧ್ಯಮಗಳನ್ನು ದೂಷಿಸುತ್ತಿದ್ದಾರೆ. ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಿದ್ದಾರೋ ಗೊತ್ತಿಲ್ಲ. ಇಂದು ಹೇಳಿಕೆ ಕೊಟ್ಟು ನಾಳೆ ವಾಪಸ್ ಪಡೆಯುತ್ತಿದ್ದಾರೆ.
ಮಾರನೆ ದಿನ ಎಲ್ಲರೂ ಬಾಯಿ ಬಾಯಿ ಅಂತಾರೆ. ಅವರಲ್ಲೆ ಗೊಂದಲಗಳಿವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿರುವ ಮುಖಂಡರ ನಾನಾ ಹೇಳಿಕೆಗಳು ಹಾಗೂ ಸಿಎಂ ಸಿದ್ದರಾಮಯ್ಯ ಅವರು, ಮುಂದಿನ 5 ವರ್ಷ ನಾನೇ ಸಿಎಂ ಎಂದು ಹೇಳಿದ ಹೇಳಿಕೆಯನ್ನು ಬಿಸಿ ಪಾಟೀಲ್ ವ್ಯಂಗ್ಯ ಮಾಡಿದರು.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಾಲ್ಕು ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾತು ಎತ್ತಿದ್ರೆ ಗ್ಯಾರಂಟಿ ಬಗ್ಗೆ ಮಾತನಾಡೋ ಇವರು ರಾಜ್ಯದ ಜನರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಾಗಿದ್ದಾರೆ. ಗ್ಯಾರಂಟಿ ಯೋಜನೆ ಕೊಡಲಿ ಅದರ ಬಗ್ಗೆ ನಮಗೇನೂ ತಕರಾರಿಲ್ಲ. ಆದರೆ, ಪದೆ ಪದೆ ಕೇಂದ್ರ ಕಡೆಗೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯದ ಜನರ, ರೈತರ ಸಂಕಷ್ಟವನ್ನು ಆಲಿಸುವ ಕೆಲಸ ಮಾಡಲಿ. ನಾನು ಕೃಷಿ ಸಚಿವನಾಗಿದ್ದಾಗ ಸಾಕಷ್ಟು ರೈತಪರ ಯೋಜನೆಗಳನ್ನು ಜಾರಿಗೆ ತಂದು ರೈತ ಅಭಿವೃದ್ಧಿಗೆ ಶ್ರಮಿಸಿರುವ ತೃಪ್ತಿ ನನಗಿದೆ ಎಂದು ಹೇಳಿದರು.