ನಾನು ತಂಡಕ್ಕಾಗಿ ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ. ಹಿಟ್ಮ್ಯಾನ್ ಆಗಮನದೊಂದಿಗೆ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಲಿದೆಯಾ ಎಂಬ ಪ್ರಶ್ನೆಗೆ ಸುದ್ದಿಗೋಷ್ಠಿ ಮೂಲಕ ಉತ್ತರ ನೀಡಿದ ಅವರು, ನನ್ನನ್ನೂ ಎಲ್ಲಿ ಬೇಕಾದರೂ ಆಡಿಸಬಹುದು. ನಾನು ತಂಡಕ್ಕಾಗಿ ಆಡಲು ಬಯಸುತ್ತೇನೆ. ಅದರಲ್ಲೂ ನಾನು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿರಲು ಬಯಸುತ್ತೇನೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ನೋವು ನಿವಾರಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದೀರಾ..? ಹಾಗಿದ್ರೆ ಅಡ್ಡ ಪರಿಣಾಮಗಳ ಬಗ್ಗೆ ಇರಲಿ ಎಚ್ಚರ
ಇದರಿಂದ ಆರಂಭಿಕನ ಸ್ಥಾನಕ್ಕಾಗಿ ತಯಾರಿ ನಡೆಸಲು ನನಗೆ ಸಾಕಷ್ಟು ಸಮಯ ಸಿಕ್ಕಿತು. ಹಾಗಾಗಿ ನಾನು ನನ್ನ ರನ್ಗಳನ್ನು ಹೇಗೆ ಗಳಿಸಬೇಕು ಮತ್ತು ನಾನು ಯಾವ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ನನಗೆ ತಿಳಿದಿತ್ತು ಎಂದು ರಾಹುಲ್ ಹೇಳಿದರು. ಇನ್ನು ಪರ್ತ್ ಟೆಸ್ಟ್ ಪಂದ್ಯಕ್ಕೂ ಮುನ್ನವೇ ನನಗೆ ಆರಂಭಿಕನಾಗಿ ಕಣಕ್ಕಿಳಿಯಬೇಕಾಗುತ್ತದೆ ಎಂದು ತಿಳಿಸಿದ್ದರು. ಏಕೆಂದರೆ ನಾನು ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕೊನೆಯ ಎರಡು ಪಂದ್ಯಗಳನ್ನಾಡಿರಲಿಲ್ಲ. ಹೀಗಾಗಿಯೇ ಆಸ್ಟ್ರೇಲಿಯಾ ಇನಿಂಗ್ಸ್ ಆರಂಭಿಸುವ ವಿಷಯವನ್ನು ತಿಳಿಸಿದ್ದರು.