ಕಲಬುರಗಿ:- ಯಾರೇನೆ ಅಂದ್ರೂ 2ನೇ ಬಾರಿಗೂ ನಾನೇ ಅಧ್ಯಕ್ಷ ಎಂದ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಎರಡನೇ ಬಾರಿ ಸ್ಪರ್ಧಿಸುತ್ತಿರುವುದಾಗಿ ಖಚಿತಪಡಿಸಿದರು. ವಿಜಯಪುರ ಶಾಸಕ ಯತ್ನಾಳ್ ಮತ್ತು ರೆಬೆಲ್ಸ್ ತಂಡ ಪ್ರತ್ಯೇಕವಾಗಿ ಸಭೆ ನಡೆಸಿರುವ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಾಣಗಾಪುರದ ದತ್ತಾತ್ರೇಯ ಅವರಿಗೆ ಒಳ್ಳೆಯದು ಮಾಡಲಿ ಎಂದರು.
2ನೇ ಬಾರಿ ರಾಜ್ಯಾಧ್ಯಕ್ಷನಾಗಿ ಮುಂದುವರೆಯುವುದರಲ್ಲಿವಯಾವುದೇ ಅನುಮಾನ ಬೇಡ. ಒಂದರ್ಥದಲ್ಲಿ ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಷ್ಟರ ಮಟ್ಟಿಗೆ ಚರ್ಚೆಯಾಗುತ್ತಿರುವುದು ಒಳ್ಳೆಯದು ಎಂದು ನುಡಿದರು