ಚಾಮರಾಜನಗರ;-ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದ ಅನಂತ ಕುಮಾರ್ ಹೆಗಡೆ ಏಕ ವಚನದಲ್ಲಿ ವಾಗ್ದಾಳಿ ಮಾಡಿದ ವಿಚಾರವಾಗಿ ಪಶು ಸಂಗೋಪನಾ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಗರಂ ಆಗಿದ್ದಾರೆ.
ಅನಂತ ಕುಮಾರ್ ಹೆಗಡೆಗೆ ಸಂಸ್ಕಾರನೇ ಇಲ್ಲಾ ಆ ಮನುಷ್ಯನಿಗೆ ಸಂಸ್ಕಾರ ಅಂದ್ರೆ ಏನು ಅಂತ ತಿಳಿದಿಲ್ಲ ಎಂದರು.
ಇನ್ನೂ ಬಾಬ್ರಿ ಮಸೀದಿ ರೀತಿ ಭಟ್ಕಳದ ಮಸೀದಿ ನಿರ್ನಾಮ ಮಾಡುತ್ತೇವೆ ಎಂಬ ಸಂಸದ ಹೇಳಿಕೆ ವಿಚಾರವಾಗಿ ಮಾತನಾಡಿ, ಸರ್ಕಾರ ಇದೆ ಕಾನೂನು ಇದೆ ಅದಕ್ಕೆಲ್ಲಾ ಏನು ಬಂದೋಬಸ್ತ್ ಮಾಡ್ಬೇಕೊ ಅದನ್ನ ಸರ್ಕಾರ ಮಾಡುತ್ತೆ. ಬೇರೆ ಸಮಾಜದ ದೇವಸ್ಥಾನಗಳನ್ನ ದ್ವಂಸ ಮಾಡುವುದಕ್ಕೆ ಬಿಡೋಕೆ ಆಗುತ್ತಾ..?? ಎಂದರು.
ಇನ್ನೂ ಮೈಸೂರಿನಿಂದ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ವಿಚಾರ
ನನಿಗೆ ಗೊತ್ತಿರುವ ಮಾಹಿತಿ ಪ್ರಕಾರ ಯತೀಂದ್ರ ಸಿದ್ದರಾಮಯ್ಯ ಮೈಸೂರಿನಿಂದ ಕಣಕ್ಕೆ ಇಳಿಯುವುದಿಲ್ಲ. ಬಿಜೆಪಿಯವರಿಗೆ ಮಾತನಾಡುವ ಚಟ ಅದಕ್ಕೆ ನಾವೇನು ಹೇಳೋದು. ನಾನಂತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಇದು ನನ್ನ ಕೊನೆ ಚುನಾವಣೆ ಅಸಂಬ್ಲಿ ಚುನಾವಣೆಗೂ ಸ್ಪರ್ಧಿಸೊಲ್ಲ ನನಿಗೆ ವಯಸ್ಸಾಗಿದೆ. ಎಂದು ಚಾಮರಾಜನಗರದಲ್ಲಿ ಜಿಲ್ಲಾ ಉಸ್ತುವಾರಿ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿಕೆ ನೀಡಿದ್ದಾರೆ.