ಪುಣೆ:- ನನಗಿನ್ನೂ ವಯಸ್ಸಾಗಿಲ್ಲ ಇನ್ನೂ ಶಕ್ತಿ ಇದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಎತ್ತಿನ ಬಂಡಿ ಓಟದ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನಗೆ ನಿಮ್ಮ ಬಗ್ಗೆ ಒಂದು ದೂರು ಇದೆ. ನನಗೆ 83 ವರ್ಷವಾಗಿದೆ ಎಂದು ನೀವು ನಿಮ್ಮ ಭಾಷಣಗಳಲ್ಲಿ ಹೇಳುತ್ತೀರಿ. ನನಗೆ 84 ವರ್ಷವಾಗಿದೆ. ನೀವು ಗಮನಿಸಿದ್ದು ಏನು? ನನಗೆ ವಯಸ್ಸಾಗಿಲ್ಲ. ನನಗೆ ಕೆಲವರನ್ನು ಸರಿಪಡಿಸುವ ಶಕ್ತಿ ಇದೆ. ತಲೆಕೆಡಿಸಿಕೊಳ್ಳಬೇಡಿ’ ಎಂದು ಹೇಳಿದ್ದಾರೆ.
ಶರದ್ ಪವಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಅಧಿಕಾರದಲ್ಲಿ ಇರುವವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಈರುಳ್ಳಿ ಸೇರಿ ಇನ್ನಿತರ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದ್ದೇ ಇದಕ್ಕೆ ಉದಾಹರಣೆ. ರೈತರಿಗೆ ಸಹಾಯ ಮಾಡುವ ಬದಲು. ಮತ್ತಷ್ಟು ಅಡೆತಡೆಗಳನ್ನು ಸೃಷ್ಠಿಸುತ್ತಿದೆ’ ಎಂದು ಪವಾರ್ ದೂರಿದರು.