ಹಾವೇರಿ:- ಸ್ವಪಕ್ಷದವರ ವಿರುದ್ಧ ಶಾಸಕ ಬಸವನಗೌಡ ಯತ್ನಾಳ್ ವಾಗ್ದಾಳಿ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈ ಕುರಿತು ರಾಷ್ಟ್ರೀಯ ನಾಯಕರು ಮಾತನಾಡ್ತಾರೆ. ನಮ್ಮಲ್ಲಿ ಏನೆ ಸಮಸ್ಯ ಇದ್ರು ಹಿರಿಯರು ಮಾತ್ನಾಳ್ತಾರೆ. ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ರಾಜ್ಯ ಸರ್ಕಾರ ಅಸಹಕಾರ ತೋರೊದು ಸರಿಯಲ್ಲ ಎಂದರು.
ಇನ್ನೂ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಜೋಶಿ ಕಾರಣ ಎಂಬ ಬಿಕೆ ಹರಿಪ್ರಸಾದ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ನಾನು ಇಷ್ಟೇ ಹೇಳೊದು ಅವರಂತೆ ನಾನು ಅಸಭ್ಯ ವರ್ತನೆ ಮಾಡಲ್ಲ. ನನ್ನ ಬಯ್ಯೊದ್ರಿಂದ ನೀವು ಮಂತ್ರಿ ಆಗೊದ್ರಿಂದ ನನಗೆ ಬೈಲಿ. ನಿಮ್ಮನ್ನ ಸಿದ್ದರಾಮಯ್ಯ ಮಂತ್ರಿ ಮಾಡಲ್ಲ ಅಂತಾ ಬಿಕೆ ಹರಿಪ್ರಸಾದಗೆ ಜೋಶಿ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿ ತೊರೆದು ಕೆಲ ನಾಯಕರು ಕಾಂಗ್ರೆಸ್ ಸೇರುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದವರು ಕಾಂಗ್ರೆಸ್ ಸೇರುವದು ಅಸಾಧ್ಯ. ಒಂದು ವೇಳೆ ಕಾಂಗ್ರೆಸ್ ಪಕ್ಷದತ್ತ ಹೋದರು ಅವರಿಗೆ ಸ್ಥಾನಮಾನ ಇರಲ್ಲ. ಯಾರಾದ್ರು ಹೋದರೆ ಅವರು ಕಾಂಗ್ರೆಸ್ ನಲ್ಲಿ ಉದ್ದಾರ ಆಗಲ್ಲ ಎಂದು ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ.