ಬೆಂಗಳೂರು: ಅಂತಹ ದೊಡ್ಡ ಅಪರಾಧ ನಡೆದಿಲ್ಲ. ನಾನೇನು ದೇಶ ಲೂಟಿ ಮಾಡಿಲ್ಲ. ಮಾತಾಡುತ್ತಿರುವವರು ಏನು ಕೆಲಸ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು. ತೋಟದಿಂದ ಬಂದಾಗ ಮಾಹಿತಿ ಬಂತು. ಕೂಡಲೇ ತೆರವು ಮಾಡಲಾಯ್ತು. ಪ್ರತಿ ಮನೆಯಲ್ಲಿ ನಡೆಯೋದು ಮಾಹಿತಿ ಇರುತ್ತಾ? ಹಬ್ಬದ ದಿನ ಕನೆಕ್ಷನ್ ತೆಗೆದುಕೊಂಡಿದ್ದಾರೆ. ನಾವೇನು ಹೇಳಿದ್ದೀವಾ ಕದ್ದು ಕರೆಂಟ್ ತಗೊಳ್ಳಿ ಅಂತ. 2000 ರೂಪಾಯಿಗೆ ಕರೆಂಟ್ ಕದೀಬೇಕಾ ನಾನು? ಭಾನುವಾರ ಹಾಗು ಸೋಮವಾರ 2 ದಿನ ಹಾಕಿದ್ದಾರೆ. ಅದು ಕೆಲಸದವರು ಮಾಡಿದ ತಪ್ಪು. ನಾನೇನು ಹರಿಶ್ಚಂದ್ರ ಅಲ್ಲ. ನಾನು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಹಾಗೆ ಮಾಜಿ ಶಾಸಕರಾದ ಗೌರಿಶಂಕರ್, ಮಂಜುನಾಥ್ ಕಾಂಗ್ರೆಸ್ ಸೇರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಹಳೆಯ ವಿಚಾರ, ಇದರಿಂದ ನನಗನೂ ಶಾಕ್ ಆಗಲ್ಲ. ಗೌರಿಶಂಕರ್, ಮಂಜುನಾಥ್ ಕರೆದು 2 ಬಾರಿ ಮಾತನಾಡಿದ್ದೇನೆ. ಅವರಿಗೆ ಅನುಕೂಲ ಆಗುವ ಕಡೆ ಹೋಗಿದ್ದಾರೆ. ನಮಗೆ ಯಾವುದೇ ತೊಂದರೆ ಆಗಲ್ಲ, ಕಾರ್ಯಕರ್ತರಿದ್ದಾರೆ ಎಂದರು.