ಬೆಂಗಳೂರು:- ಟ್ರೋಲ್ ಗೆ ಹೆದರುವ ಮಗ ನಾನಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ ಆಗಿದ್ದಾರೆ.
R Ashok: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ: ಆರ್.ಅಶೋಕ್!
ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬ ವಿದ್ಯಾರ್ಥಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ನಾನು ಟ್ರೋಲ್ಗೆ ಹೆದರುವುದಿಲ್ಲ. ವಿದ್ಯಾರ್ಥಿ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ನಾನು ಹೇಳಿಲ್ಲ. ಹೆಡ್ ಮಾಸ್ಟರ್, ಬಿಇಓ ವಿರುದ್ದ ಕ್ರಮ ತೆಗೆದುಕೊಳ್ಳಿ ಅಂತ ಹೇಳಿದ್ದು. ನಾನೇ ಅದನ್ನು ಹೇಳಿದ್ದೇನೆ ಎಂದರು.
ಟ್ರೋಲ್ಗಳಿಗೆಲ್ಲಾ ತಲೆಕೆಡಿಸಿಕೊಳ್ಳೋ ಮಧು ಬಂಗಾರಪ್ಪ ಅಲ್ಲ ನಾನು. ಮಕ್ಕಳ ಮೇಲೆ ಆಕ್ಷನ್ ತಗೊಳ್ಳೋಕೆ ನಮಗೆ ಅಧಿಕಾರ ಇಲ್ಲ. ನಿಮ್ಮ ಮಕ್ಕಳನ್ನ ಹತೋಟಿಯಲ್ಲಿ ಇಡಬೇಕು ಅಂತ ಹೆಡ್ ಮಾಸ್ಟರ್, ಬಿಇಓ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ನಿಮ್ಮ ಮಗ ಹಾಗೆ ಮಾತನಾಡಿದ್ರೆ ನೀವು ಏನ್ ಮಾಡ್ತಿದ್ರಿ?ನಾನಾಗಿದ್ರೆ ನನ್ನ ಮಗನ ಜೊತೆ ಮಾತಾಡುತ್ತಿದ್ದೆ ಅಂತ ಮತ್ತೆ ರಾಂಗ್ ಆದ್ರು. ಮಾಧ್ಯಮಗಳು ಸುಮ್ಮನೆ ಇಲ್ಲದೆ ಇರೋದು ತರಬೇಡಿ. ಪದೇ ಪದೇ ಇದನ್ನ ತರೋದು ಮಾಧ್ಯಮಗಳು ಕಿಡಿಕಾರಿದರು.