ಬಾಗಲಕೋಟೆ:- ಸರಳವಾಗಿ ಸೋಲು ಒಪ್ಪಿಕೊಳ್ಳುವ ಹೆಣ್ಣುಮಗಳು ನಾನಲ್ಲ ಎಂದು ವೀಣಾ ಕಾಶಪ್ಪನವರ್ ಹೇಳಿದ್ದಾರೆ.
ಈ ಸಂಬಂಧ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯಾವತ್ತೂ ವೀಣಾ ಕಾಶಪ್ಪನವರ ಫೈಟರ್. ಸರಳವಾಗಿ ಸೋಲು ಒಪ್ಪಿಕೊಳ್ಳುವ ಹೆಣ್ಣುಮಗಳು ನಾನಲ್ಲ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆ ಬಳಿಕ ವೀಣಾ ಕಾಶಪ್ಪನವರ್ ಕಿಡಿಕಾರಿದ್ದಾರೆ.
ಇದೆ ವೇಳೆ ಸಂಯುಕ್ತ ಪಾಟೀಲಗೆ ವೀಣಾ ಟಾಂಗ್ ಕೊಟ್ಟಿದ್ದಾರೆ. ಇವತ್ತಿನಿಂದ ಹೊಸ ಅಧ್ಯಾಯ ಆರಂಭ. ಬಾಗಲಕೋಟ ಇತಿಹಾಸದಲ್ಲಿ ವೀಣಾ ಕಾಶಪ್ಪನವರ ಹೆಸರು ಇದ್ದೆ ಇರುತ್ತೆ. ಕೆಲವರು ನನ್ನ ರಾಜಕೀಯ ಜೀವನ ಮುಗಿತು ಅಂತಿದ್ದಾರೆ. ರಾಜಕೀಯವಾಗಿ ಅವರನ್ನ ಮುಗಿಸಿ ಬಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಆದರೆ, ನನ್ನದು ಹೊಸ ಅಧ್ಯಾಯ ಆರಂಭವಾಗಿದೆ. ಬಾಗಲಕೋಟ ಮುನ್ನುಡಿ ಬರೆದೇ ಬರೆಯುವೆ. 2028 ರ ವಿಧಾನಸಭೆ ಅಥವಾ 2029 ರ ಲೋಕಸಭೆ ಎರಡರಲ್ಲಿ ಒಂದರಲ್ಲಿ ಹೆಸರು ಬರೆಯುತ್ತೇನೆ. ಮಹಿಳಾ ಶಕ್ತಿಯಾಗಿ ನಾನು ಇದ್ದೇ ಇರುತ್ತೇನೆ. ವಿರೋಧಿಗಳಿಗೆ ವೀಣಾ ಎಚ್ಚರಿಕೆ ಸಂದೇಶ. 2028ರಲ್ಲಿ ಅವಕಾಶ ಕೊಟ್ಟರೂ ರೆಡಿ, 2029 ಕ್ಕೂ ರೆಡಿ. ಮುಂದಿನ ಚುನಾವಣೆಗೆ ವೀಣಾ ಕಾಶಪ್ಪನವರ್ ತಯಾರಿ ಇದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗದೇ ಇದ್ರೂ. ನನ್ನ ಬೆಂಬಲಿಗರಿಗೆ ಹೋಗಬೇಡಿ ಅಂತ ಯಾರಿಗೂ ಹೇಳಿರಲಿಲ್ಲ. ನನ್ನ ಬೆಂಬಲಿಗರೆಲ್ಲ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ನನಗೆ ಕೊಪ್ಪಳ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ರು, ಅಲ್ಲಿಗೆ ಹೋಗಿದ್ದೆ. ಕ್ಷೇತ್ರದಲ್ಲಿ ನನ್ನ ಅವಶ್ಯಕತೆ ಇರಲಿಕ್ಕಿಲ್ಲ,ಅವರು ಕರೆಯಲಿಲ್ಲ. ಹಾಗೆಂದು ನಾನು ನನ್ನ ಬೆಂಬಲಿಗರಿಗೆ ಯಾವುದೇ ನಿರ್ಬಂಧ ಹಾಕಿರಲಿಲ್ಲ. ವೀಣಾ ಕಾಶಪ್ಪನವರ ಅವರನ್ನ ದುಡ್ಡಿನಿಂದ ಅಳೆಯಲು ಆಗಲ್ಲ. ವೀಣಾ ಕಾಶಪ್ಪನವರ ಬೆಲೆ ಹತ್ತು, ಇಪ್ಪತ್ತು ಕೋಟಿ ಅಲ್ಲ. ನನ್ನ ಲೋಕಸಭೆ ಕ್ಷೇತ್ರದಲ್ಲಿ ಇರುವ 17.5 ಲಕ್ಷ ಮತದಾರರ ಆಸ್ತಿ ಈ ವೀಣಾ. ಸಚಿವ ಶಿವಾನಂದ್ ಪಾಟೀಲ್ ವಿರುದ್ಧವು ಸಹ ವೀಣಾ ಕಿಡಿಕಾರಿದ್ದಾರೆ.
ತಮ್ಮ ಬಗ್ಗೆ ಅಪಪ್ರಚಾರಕರ ವಿರುದ್ದ ವೀಣಾ ಕಾಶಪ್ಪನವರ ಗುಡುಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಆರಂಭದಲ್ಲಿ ಗುಡುಗಿದ್ದಾರೆ. ಬಳಿಕ ದುಡ್ಡು ಪಡೆದು ಮೌನ ವಹಿಸಿದರು ಎನ್ನುವ ಆರೋಪಕ್ಕೆ ಖಾರವಾಗಿ ವೀಣಾ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಮಾರಾಟ ಆಗುವ ಆಸ್ತಿ ಅಲ್ಲ. ನನ್ನನ್ನು ನಾನು ಹಿಂದೆ, ಮುಂದೆಯೂ ದುಡ್ಡಿಗೆ ಮಾರಾಟ ಮಾಡಿಕೊಳ್ಳುವವಳಲ್ಲ. ನಾನು ದುಡ್ಡು ಪಡೆದಿದ್ರೆ ನಾನು ಪ್ರಚಾರಕ್ಕೆ ಹೋಗದೇ ಇದ್ದಾಗ. ಸಚಿವ ಶಿವಾನಂದ ಪಾಟೀಲ ಹಾಗೂ ಅವರ ಪುತ್ರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಸುಮ್ಮನೆ ಇರ್ತಿದ್ರಾ..? ಎಂದು ವಿರೋಧಿಗಳಿಗೆ ವೀಣಾ ಕಾಶಪ್ಪನವರ್ ಪ್ರಶ್ನೆ ಮಾಡಿದ್ದಾರೆ. ಹೌದು, ಕಳೆದ ಐದು ವರ್ಷ ನಾನು ಪಕ್ಷ ಸಂಘಟನೆ ಮಾಡಿದೆ. ಲೋಕಸಭೆ ಕ್ಷೇತ್ರದಲ್ಲಿ 8 ರಿಂದ 10 ಕೋಟಿ ಖರ್ಚು ಮಾಡಿದ್ದೆ. ನನಗೆ ಟಿಕೆಟ್ ಸಿಕ್ಕಿಲ್ಲ ಅಂತ ವಾಪಸ್ಸು ದುಡ್ಡು ಅಂತ ಕೇಳುವವಳಲ್ಲ. ಈ ಬಗ್ಗೆ ಆರೋಪಗಳು ಚುನಾವಣೆಯಲ್ಲೆ ಕೇಳಿ ಬಂದಿತ್ತು. ಆಗಲೇ ಉತ್ತರ ಕೊಟ್ಟಿದ್ದರೆ ಅಭ್ಯರ್ಥಿಗೆ ತೊಂದರೆ ಆಗುತ್ತಂತ ಸುಮ್ಮನಿದ್ದೆ. ಈಗ ಸಂದರ್ಭ ಬಂದಿದೆ,ಉತ್ತರ ಕೊಡುತ್ತಿದ್ದೇನೆ. ನಾನು ದುಡ್ಡು ಪಡೆದಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಆರೋಪ ಕೇಳಿ ಬಂದಿದೆ.
ನಮ್ಮದು ಕಾಂಗ್ರೆಸ್ ಕುಟುಂಬ. ಪಕ್ಷ ನನಗೆ ಸೂಕ್ತ ಸ್ಥಾನಮಾನ ಕೊಡುವ ಭರವಸೆ ನೀಡಿದೆ. ನಾನು ಈ ಜಿಲ್ಲೆಯ ಮನೆ ಮಗಳು ಎಂದರು. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಾರದ ಬಗ್ಗೆ ವಿಚಾರವಾಗಿ ಮಾತನಾಡಿ, ಸಚಿವ ಶಿವಾನಂದ ಪಾಟೀಲ ಹಾಗೂ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ
ನಾಮಪತ್ರ ಸಲ್ಲಿಕೆಗೆ ಕರೆದಿದ್ರು ಹೋಗಿದ್ದೆ. ಬಳಿಕ ಯಾವುದೇ ಸಭೆಗೆ ನನ್ನ ಕರೆಯಲಿಲ್ಲ, ನಾನು ಹೋಗಲಿಲ್ಲ. ಅಲ್ಲದೇ ಪಕ್ಷ ನನಗೆ ಕೊಪ್ಪಳ ಕ್ಷೇತ್ರಕ್ಕೆ ಇನ್ ಚಾರ್ಜ್ ಮಾಡಿತ್ತು. ನಾನು ಆ ಕ್ಷೇತ್ರದಲ್ಲಿ ಕೆಲಸ ಮಾಡಿದೆ ಎಂದರು.