ಹುಬ್ಬಳ್ಳಿ:- ನನಗೆ ಸಿಎಂ ಸಿದ್ದರಾಮಯ್ಯ ಅಷ್ಟೇನೂ ಪರಿಚಯಸ್ಥರಲ್ಲ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ʻನಾನು ಪುಟ್ಬಾಲ್ ಇದ್ದಂತೆ. ತುಳಿದಷ್ಟು ಮೇಲೆ ಪುಟ್ಟಿದೇಳುತ್ತೇನೆʼ ಎಂದು ಹೇಳುವ ಮೂಲಕ ಸಿಎಂಗೆ ಟಾಂಗ್ ನೀಡಿದ್ದಾರೆ.
ʻನನಗೆ ಸಿಎಂ ಅಷ್ಟೇನು ಪರಿಚಯವಿಲ್ಲ, ನಾನೆಂದು ಮ್ಯಾಚ್ ಫಿಕ್ಸಿಂಗ್ ರಾಜಕಾರಣ ಮಾಡಿಲ್ಲ, ಮಾಡಿದ್ರೆ ನಂಗೆ ಎಲ್ಲರೂ ಚೆನ್ನಾಗಿರ್ತಿದ್ರುʼ ಅಂತ ಸಿಎಂ ವಿರುದ್ದ ಹರಿಪ್ರಸಾದ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಅರಮನೆ ಮೈದಾನದಲ್ಲಿ ನಡೆದ ಈಡಿಗ ಸಮಾವೇಶಕ್ಕೆ ಗೈರಾದ ಬಗ್ಗೆ ರಿಪ್ಲೈ ನೀಡಿ, ಇದು ರಾಜಕೀಯ ಪ್ರೇರಿತ ಮತ್ತು ರಾಜಕೀಯ ಕುತಂತ್ರದಿಂದ ಆಯೋಜನೆ ಆಗಿರೋ ಸಮಾವೇಶ. ಅದ್ರಿಂದ್ಲೇ ನಾನು ಹೋಗುತ್ತಿಲ್ಲ. ನಮ್ಮ ಸಮಾಜಕ್ಕೆ ಒಳ್ಳೆಯದಾಗುವುದಿದ್ದರೆ ನಾನು ಪಾಲ್ಗೊಳ್ಳುತ್ತಿದ್ದೆ. ರಾಜಕೀಯ ಪ್ರೇರಿತ ಸಮಾವೇಶಗಳಲ್ಲಿ ನಾನು ಭಾಗಿಯಾಗುವುದಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಸಚಿವ ಸ್ಥಾನ ವಿಚಾರದಲ್ಲಿ ಈಡಿಗ ಸಮುದಾಯದಿಂದ ತಮ್ಮ ಬದಲಿಗೆ ಮಧು ಬಂಗಾರಪ್ಪ ಅವ್ರನ್ನ ಮಂತ್ರಿ ಮಾಡಿದ್ದರು. ಇದೀಗ ಈಡಿಗ ಸಮಾವೇಶಕ್ಕೆ ಮಧು ಬಂಗಾರಪ್ಪ ಸಿಎಂಗೆ ಆಹ್ವಾನಿಸಿ ಬಿ.ಕೆ ಹರಿಪ್ರಸಾದ್ಗೆ ಟಾಂಗ್ ಕೊಟ್ಟ ಹಿನ್ನಲೆ ಹರಿಪ್ರಸಾದ್ ಕಿಡಿಕಾರಿದ್ದಾರೆ