ಅಸ್ಸಾಂ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ರಿಯಾನ್ ಪರಾಗ್ ಅವರು ಒಂದಲ್ಲ ಒಂದು ದಿನ ಭಾರತ ತಂಡಕ್ಕೆ ಆಯ್ಕೆಯಾಗುತ್ತೇನೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ದೇವದರ್ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳು ಹಾಗೂ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಸತತ 7 ಅರ್ಧಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು.
“ನಾನು ನಮ್ಮ ತಂಡದ ಆಟಗಾರರಿಗೆ ಸ್ಪಷ್ಟವಾಗಿ ಒಂದು ವಿಷಯವನ್ನು ತಿಳಿಸಿದ್ದೇನೆ. ಕಳೆದ 5 ಅಥವಾ 10 ವರ್ಷಗಳಿಂದ ಅಸ್ಸಾ ತಂಡ ಯಾವ ಹಾದಿಯಲ್ಲಿ ಆಡಿತ್ತು ಅದನ್ನು ನೀವು ನನ್ನ ನಾಯಕತ್ವದಲ್ಲಿ ಮುಂದುವರಿಸಬಾರದು. ಆಟಗಾರನಾಗಿ ನನ್ನ ಕೆಲಸ ಏನೆಂದರೆ, ರನ್ ಗಳಿಸುವುದು ಹಾಗೂ ತಂಡವನ್ನು ಗೆಲ್ಲಿಸುವುದು,” ಎಂದು ಅಸ್ಸಾಂ ನಾಯಕ ಹೇಳಿದ್ದಾರೆ. ಇದಕ್ಕೆ ನಾನು ಅಂಟಿಕೊಂಡಿದ್ದೇನೆ. ಆದರೆ, ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಅಥವಾ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ನನ್ನದೇ ಒಂದು ನಿರ್ದಿಷ್ಟ ಗುರಿ ಇಲ್ಲ,” ಎಂದು ಯುವ ಬ್ಯಾಟ್ಸ್ಮನ್ ತಿಳಿಸಿದ್ದಾರೆ.
ನನ್ನ ದೃಷ್ಟಿಕೋನ ಸ್ಪಷ್ಟವಾಗಿದೆ. ಪ್ರತಿಯೊಂದು ಪಂದ್ಯವನ್ನು ನಾನು ಆನಂದಿಸಬೇಕು. ಅದನ್ನು ಬಿಟ್ಟು ತಂಡದ ಆಯ್ಕೆ ಹಾಗೂ ಪ್ರವಾಸಗಳ ಬಗ್ಗೆ ನಾನು ಚಿಂತಿಸುವುದಿಲ್ಲ,” ಎಂದು ಹೇಳಿದ್ದಾರೆ.