ಕೋಲಾರ:- ಇಲ್ಲಿನ ಟಿಎಪಿಸಿಎಂಎಸ್ಗೆ ಸಾಮಾನ್ಯ ರೈತರು ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಅವರಲ್ಲಿ ಸೂಕ್ತ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿರುವು ತುಂಬಾ ಸಂತೋಷವಾಗಿದೆ ಇದು ತಾಲೂಕಿನ ರೈತರ ಗೆಲುವಾಗಿದೆ ಎಂದು ಸಿಎಂ ಆರ್ ಶ್ರೀನಾಥ್ ಅವ್ರು ತಿಳಿಸಿದ್ರು.
ನಗರದ ತಮ್ಮ ನಿವಾಸದಲ್ಲಿ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ವಡಗೂರು ರಾಮು ಹಾಗೂ ಉಪಾಧ್ಯಕ್ಷ ಎಲ್.ಆರ್.ರಾಜಣ್ಣ ಅವರನ್ನು ಸನ್ಮಾಸಿ ನಂತರ ಸುದ್ದಿಗಾರೊಂರಿಗೆ ಮಾತನಾಡಿದ್ರು.
ಟಿಎಪಿಸಿಎಂಎಸ್ನ 14 ಸ್ಥಾನಗಳ ಪೈಕಿ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಗಳು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಒಬ್ಬ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅವಿರೋಧ ಆಯ್ಕೆಯಾಗಿದ್ದಬೇಕಿದ್ದುದನ್ನು ಚುನಾವಣೆ ನಡೆಯುವಂತೆ ಕುತಂತ್ರ ಕೆಲಸ ಮಾಡಿ ನಮ್ಮ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕಾಂಗ್ರೆಸ್ಸಿನವರಿಗೆ ರೈತರು ತಕ್ಕಪಾಠ ಕಲಿಸಿದ್ದಾರೆ ಎಂದರು.
ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೂ ಕಾಂಗ್ರೆಸ್ಸಿನವರು ಸಂಖ್ಯಾಬಲವಿಲ್ಲದೇ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಜೆಡಿಎಸ್, ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದು, ಕುತಂತ್ರ ರಾಜಕಾರಣಕ್ಕೆ ತೆರೆ ಬಿದ್ದಿದೆ ಎಂದ ಅವರು, ಕಾಂಗ್ರೆಸ್ಸಿನವರೊಂದಿಗೆ ಯಾವುದೇ ರಾಜಿ, ಒಳ ಒಪ್ಪಂದ ಮಾಡಿಕೊಂಡಿಲ್ಲವೆಂದು ಸ್ಪಷ್ಟಪಡಿಸಿದರು.
ಇನ್ನು ಟಿಎಪಿಸಿಎಂಎಸ್ನಲ್ಲಿ ಒಂದೇ ಸಮುದಾಯವರಿಗೆ ಆದ್ಯತೆ ನೀಡಲಾಗಿದೆ ಎನ್ನುವ
ಕಾಂಗ್ರೆಸ್ಸಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿನವರೇ ಆ ಕೆಲಸ ಮಾಡಿ ಇದೀಗ ಆರೋಪ
ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ, ಸ್ಥಳೀಯವಾಗಿ ಕಾಂಗ್ರೆಸ್ ಸರಕಾರವಿದ್ದರೂ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಕಾರಣ ಅಭಿವೃದ್ಧಿಯ ಸಿದ್ಧಾಂತಗಳನ್ನು ಬಿಟ್ಟು, ಬಿಟ್ಟಿ ಭಾಗ್ಯಗಳ ಮೂಲಕ ಜನರ ದಿಕ್ಕು ತಪ್ಪಿರುವುದಾಗಿದೆ ಎಂದು ಕಿಡಿಕಾರಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಬಿಟ್ಟು ಯಾವುದೂ ಪರಿಪೂರ್ಣವಾಗಿಲ್ಲ.
200 ಯೂನಿಟ್ ವಿದ್ಯುತ್ ಎಂದು ಹೇಳಿದ್ದಾರೆ, ಆದರೆ 100 ಯೂನಿಟ್ ಸಹ ನೀಡುತ್ತಿಲ್ಲ. ಗ್ಯಾರೆಂಟಿಗಳನ್ನು
ನಂಬಿ ಮತ ಹಾಕಿದವರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಸದ್ಯದಲ್ಲೇ ಜೆಡಿಎಸ್, ಬಿಜೆಪಿ ವರಿಷ್ಠರು
ಚರ್ಚಿಸಿ ಲೋಕಸಭೆ ಅಭ್ಯರ್ಥಿ ಕುರಿತು ತೀರ್ಮಾನ ಮಾಡಲಿದ್ದಾರೆ. ಬಿಜೆಪಿ ಅಥವಾ ಜೆಡಿಎಸ್ನಿಂದ
ಯಾರೇ ಅಭ್ಯರ್ಥಿಯಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಗೆಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ವಡಗೂರು ರಾಮು, ಉಪಾಧ್ಯಕ್ಷ ಎಲ್.ಆರ್.
ರಾಜಣ್ಣ, ನಿರ್ದೇಶಕರು, ಮುಖಂಡ ವಕ್ಕಲೇರಿ ರಾಮು ಮತ್ತಿತರರು ಇದ್ದರು.