ಮೈಸೂರು:- ನಾನು ವಿಪಕ್ಷ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸೂಕ್ತ ವ್ಯಕ್ತಿಯನ್ನು ನಮ್ಮ ನಾಯಕರು ನೇಮಿಸುತ್ತಾರೆ. ಬಿಜೆಪಿಯ ಶಾಸಕರೆಲ್ಲರೂ ಆಕಾಂಕ್ಷಿಯಾಗಿದ್ದಾರೆ. ನಮ್ಮಲ್ಲೇ ಬೇಕಾದಷ್ಟು ನಾಯಕರಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಆಗಿರಬಹುದು. ಹಾಗೆಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಕೊಡಬೇಕೆಂದೇನಿಲ್ಲ’ ಎಂದರು.
‘ಬಿ.ವೈ. ವಿಜಯೇಂದ್ರ ಯುವಕ. ಪಕ್ಷವನ್ನು ಸಮರ್ಥವಾಗಿ ಕಟ್ಟುತ್ತಾರೆ. ಸಾಕಷ್ಟು ಜನ ಆಕಾಂಕ್ಷಿಗಳಿದ್ದರು. ಅದರಲ್ಲಿ ಹಿರಿಯರೂ ಇದ್ದರು. ಆದರೆ, ಕಿರಿಯರಿಗೆ ಕೊಡಬಾರದು ಎಂದೇನಿಲ್ಲ. ವಿ.ಸೋಮಣ್ಣ ಪ್ರಭಾವಿ ನಾಯಕರು. ಅವರಿಗೂ ಎಲ್ಲ ರೀತಿಯ ಅರ್ಹತೆ ಇತ್ತು. ಸಿ.ಟಿ. ರವಿ ಅವರಿಗೂ ಪಕ್ಷ ಅನೇಕ ಹುದ್ದೆಗಳನ್ನು ನೀಡಿದೆ. ಒಂದು ಹುದ್ದೆಯನ್ನು ಎಲ್ಲರಿಗೂ ಕೊಡಲಾಗದು. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
ಲೋಕಸಭಾ ಚುನಾವಣೆ ಬಳಿಕ ನಾವೇನು ರಾಜ್ಯ ಸರ್ಕಾರ ಬೀಳಿಸುವುದಿಲ್ಲ. ಅವರ ಪಕ್ಷದವರಿಂದಲೇ ಸರ್ಕಾರ ಬೀಳಲಿದೆ’ ಎಂದರು.