ಬಾಗಲಕೋಟೆ:- ಬಿಜೆಪಿಯಲ್ಲಿ ಪ್ರಾಮಾಣಿಕ ಕಾರ್ಯಕರ್ತ ನಾನೇ, ನಾನ್ಯಾಕೆ ಸಿಎಂ ಆಗ್ಬಾರ್ದು ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.
ಬಿಗ್ ಬಾಸ್ ಗೆ ಅಗೌರವ: ಕಿಚ್ಚನ ಕ್ಲಾಸ್, ಇಂದೇ ಮನೆಯಿಂದ ಹೋಗುತ್ತೇನೆ ಎಂದ ತ್ರಿವಿಕ್ರಮ್!
ಈ ಸಂಬಂಧ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಯಾಕೆ ಆಗಬಾರದು? ನನ್ನಲ್ಲಿ ಏನು ಕೊರತೆ ಇದೆ? ಪ್ರಾಮಾಣಿಕರನ್ನ ಸಿಎಂ ಮಾಡಬೇಕು ಅಂದ್ರೆ ಮೊದಲು ನನ್ನ ಹೆಸರೇ ಬರುತ್ತೆ. ಒಳ್ಳೆಯ ಮನುಷ್ಯ ಸಿಎಂ ಆಗಬೇಕು ಅಂತ ದೇವರು ಆದೇಶ ಕೊಟ್ಟರೆ ನಾನೇ ಸಿಎಂ ಆಗ್ತೀನಿ. ಇಲ್ಲದಿದ್ದರೆ ನನ್ನ ಪಾಡಿಗೆ ಇರ್ತೀನಿ ಅಂತ ಯತ್ನಾಳ್ ಹೇಳಿದ್ದಾರೆ.
ಭ್ರಷ್ಟಾಚಾರ ಅಥವಾ ಏನಾದರೂ ಹಗರಣ ಇದ್ದಿದ್ದರೆ ನನ್ನನ್ನ ಬಿಡ್ತಿದ್ರಾ? ಈ ಹಿಂದೆ ನನ್ನ ಮೇಲೂ ದಾಳಿ ಮಾಡಿಸಿದ್ದಾರೆ, ಗುಪ್ತಚರ ಇಲಾಖೆಯನ್ನೂ ಬಿಟ್ಟಿದ್ದರು. ಎಲ್ಲವನ್ನೂ ನೋಡಿದ್ರೂ ಏನೂ ಆಗಲಿಲ್ಲ. ಅದಕ್ಕೆ ಸುಮ್ಮನೆ ಕೂತಿದ್ದಾರೆ ಅಷ್ಟೇ. ನನ್ನ ಮೇಲೆ ಆ ಭಗವಂತನ ಕೃಪೆ ಇದೆ, ಜನರ ಶಕ್ತಿ ಇದೆ ಎಂದರು.