ಧಾರವಾಡ: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಎಂದು ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿನಯ ಕುಲಕರ್ಣಿ, ಸಚಿವ ಸ್ಥಾನಕ್ಕೆ ಸಿ.ಪಿ.ಯೋಗೇಶ ಮತ್ತು ಸವದಿ ಹೆಸರು ಕೇಳಿ ಬರುತ್ತಿದೆ.
ಹುಡುಗರಿಗೆ ಕುಳ್ಳಗಿರೋ ಹುಡುಗಿಯರೇ ಹೆಚ್ಚು ಲೈಕ್ ಆಗ್ತಾರಂತೆ! ಇದಕ್ಕೆ ಸ್ಟ್ರಾಂಗ್ ರೀಸನ್ ಇಲ್ಲಿದೆ!
ಇನ್ನು ಈ ಕುರಿತು ಹೈ ಕಮಾಂಡ್ ತೀರ್ಮಾನ ತೆಗೆದುಕೋಳ್ಳಲಿದೆ. ಇದಕ್ಕೆ ನನ್ನ ವೈಯಕ್ತಿಕ ಅಭಿಪ್ರಾಯ ಏನು ಇಲ್ಲ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಪಂಚಮಸಾಲಿ ಹೋರಾಟ ವಿಚಾರ, ಕಳೆದ ಅಧಿವೇಶನದಲ್ಲಿ ಸ್ಪೀಕರ್ ಅವರಿಗೆ ಸಮಯ ಕೇಳಿದ್ದೆವು. ಆದರೆ ಸದನ ನಡೆಯಲಿಲ್ಲ. ಮುಡಾ ಹಗರಣದಿಂದ ಒಂದು ದಿನವು ಕೂಡ ಸದನ ನಡೆಯಲು ಬಿಡಲಿಲ್ಲ. ಆ ಸಮಯದಲ್ಲಿ ಯಾರಿಗೂ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಹೇಳಿದರು.
ಹೋರಾಟದಲ್ಲಿ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿ ಆತರ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗಲು ಕೂಡ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಸ್ವಾಮೀಜಿ ನ್ಯಾಯ ಸಿಗುವರೆಗೂ ಹೋರಾಟ ಮಾಡುವವರು. ನಮ್ಮ ಸರ್ಕಾರ ಇದ್ದರು ನಾವು ಬೇಡ ಎಂದು ಹೇಳಲು ಆಗಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಕೇಳುತ್ತಿದ್ದಾರೆ. ರಿಜರ್ವರೇಶನ ಫಿಕ್ಸ್ ಮಾಡಲು ಕಷ್ಟ ಇದೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿ ಎಂಬುದು ನಮ್ಮ ಒತ್ತಾಯ ಇದೆ. ಕೆಲ ಶಾಸಕರಿಗೆ ಮಂತ್ರಿ ಮಾಡುವ ಆಸೆ ತೋರಿಸಿ ಹೋರಾಟದಿಂದ ದೂರ ಮಾಡಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ. ನಾನು ಮಾತ್ರ ಹೋರಾಟಕ್ಕೆ ಹೋಗುವೆ. ನಾನು ಹುಟ್ಟ ಹೋರಾಟಗಾರನಿದ್ದೆನೆ. ಕೆಲವರು ಮಂತ್ರಿ ಆಸೆಯಿಂದ ಮಾತನಾಡುತ್ತಿಲ್ಲ ಎಂಬ ವಿಚಾರ ಕೇಳಿಬರುತ್ತಿದೆ, ಈ ಕುರಿತು ವಿನಯ್ ನನಗೆ ಏನೂ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಕೆಪಿಸಿಸಿ ಅದ್ಯಕ್ಷ ಬದಲಾವಣೆ ವಿಚಾರ, ಅದ್ಯಕ್ಷ ಸ್ಥಾನಕ್ಕೆ ಮೂವರು ಆಕಾಂಕ್ಷೆಗಳು ಇದ್ದಾರೆ. ಈ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ, ಮಾಧ್ಯಮದಲ್ಲಿ ಬರುತ್ತಿದೆ ಅಷ್ಟೆ. ಇದರ ಬಗ್ಗೆ ಮೀಟಿಂಗ್ ಆಗಿಲ್ಲ, ಇನ್ನೂ ಸಮಯ ತೆಗೆದುಕೋಳ್ಳುತ್ತದೆ. ಡಿಕೆಶಿ ಅವರು ಸಚಿವರು ಇರೋ ಕಾರಣ ಕೆಲಸ ಮಾಡಲು ಕಷ್ಟವಾಗುತ್ತಿದೆ. ಒತ್ತಡ ಜಾಸ್ತಿ ಆಗಿರೋ ಕಾರಣ ಬದಲಾವಣೆ ಮಾಡುತ್ತಿದ್ದಾರೆ. ನಾವು ಹೇಳಿದವರನ್ನು ಹೈಕಮಾಂಡ್ ಮಾಡಲ್ಲ. ಯಾರು ಒಳ್ಳೆಯವರು ಅವರನ್ನೆ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎಂದು ವಿನಯ ಕುಲಕರ್ಣಿ ತಿಳಿಸಿದರು.