ಬೆಂಗಳೂರು: ಕುಟುಂಬ ರಾಜಕಾರಣದ ಬಗ್ಗೆ ಈಗ ಮಾತನಾಡುವುದು ತಪ್ಪಾಗುತ್ತೆ. ಎಲ್ಲೆಲ್ಲೆಗೊ ಕನೆಕ್ಟ್ ಆಗುತ್ತೆ ಇಗ ಉತ್ತರಿಸುವುದಿಲ್ಲ. ನಾನು ಪಕ್ಷದ ಕಟ್ಟಾಳು. ಪಕ್ಷದ ನಿರ್ಣಯದ ವಿರುದ್ದ ಮಾತಾಡಿಲ್ಲಾ. ನಿರ್ಣಯ ಸರಿಯಿಲ್ಲ ಅನಿಸಿದರೆ ವೇದಿಕೆ ಇದೆ ಎಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಗುರಿ ಇಟ್ಟಿದ್ದೇವೆ: ಬಿ.ಎಸ್.ಯಡಿಯೂರಪ್ಪ
ಬದಲಾಗದೇ ಇರೋದು ಕಾರ್ಯಕರ್ತ ಅನ್ನೋದು. ಈಗ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ನೇಮಕ ಮಾಡಿದೆ. ವೈಚಾರಿಕ ಭದ್ರತೆ ಜೊತೆಗೆ ಪಕ್ಷ ಕಟ್ಟುವ, ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ 28ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ, ಯಶಸ್ವಿಯಾಗಲಿ ಎಂದು ತಿಳಿಸಿದರು.
ನೂತನ ಅಧ್ಯಕ್ಷನ ಆಯ್ಕೆ ಬಗ್ಗೆ ಕಾಂಗ್ರೆಸ್ (Congress) ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಸಮಾಧಾನದ ಬಗ್ಗೆ ಈಗ ನಾನು ಏನು ಮಾತನಾಡಲ್ಲ. ಈಗಾಗಲೆ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. ಬೂತ್ ಅಧ್ಯಕ್ಷನಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರೆಗೂ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗಾಗಲೆ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದರೂ ಮಾತನಾಡಿದರೇ ನಮ್ಮ ಮಾತೇ ನಮಗೆ ತಿರುಗುಬಾಣವಾಗುತ್ತೆ ಎಂದು ಹೇಳಿದರು