ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ‘ಛಾವಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕಾಲಿಗೆ ಏಟಾಗಿದ್ದರು ಯಾವುದನ್ನೂ ಲೆಕ್ಕಿಸದ ನಟಿ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿನ ಛಾವಾ ಸಿನಿಮಾದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ ತಾವು ರಿಲೇಷನ್ಶಿಪ್ನಲ್ಲಿ ಇರುವ ಸುಳಿವು ನೀಡಿದ್ದಾರೆ.
ನನಗೆ ನನ್ನ ಮನೆಯೇ ಖುಷಿಯ ಸ್ಥಳ. ಯಶಸ್ಸು ಇಂದು ಬಂದು ಮುಂದೊಂದು ದಿನ ಹೋಗಬಹುದು. ಅದು ಎಂದಿಗೂ ಶಾಶ್ವತವಲ್ಲ. ಎಷ್ಟೇ ಸಿಕ್ಕರೂ ಕೂಡ ನಾನು ನಟಿ ಮಾತ್ರವಲ್ಲದೇ ಮಗಳು, ಸಹೋದರಿ, ಓರ್ವ ಪಾರ್ಟ್ನರ್ ಕೂಡ ಹೌದು ಎಂದು ಹೇಳಿದ್ದಾರೆ. ಎಲ್ಲೂ ಕೂಡ ಸಂಗಾತಿ ಯಾರು ಎಂದು ಹೆಸರನ್ನು ಅವರು ರಿವೀಲ್ ಮಾಡಿಲ್ಲ. ಪಾರ್ಟ್ನರ್ ಎಂದು ಪದ ಬಳಸಿದ ರಶ್ಮಿಕಾ, ತಾವು ರಿಲೇಷನ್ಶಿಪ್ನಲ್ಲಿರೋದಾಗಿ ಹೇಳಿದ್ದಾರೆ ಎನ್ನಲಾಗುತ್ತಿದ್ದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಇನ್ನೂ ರಶ್ಮಿಕಾ ಹೆಸರು ವಿಜಯ್ ದೇವರಕೊಂಡ ಜೊತೆ ಕೇಳಿ ಬರುತ್ತಿರುತ್ತದೆ. ಹಲವು ಭಾರಿ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.