ಶಿವಮೊಗ್ಗ: ಮುಂದಿನ ಚುನಾವಣೆಯಲ್ಲಿ ಸೋಲು ಅಥವಾ ಗೆಲುವು ಎಂದು ನಾನು ಕೆಲಸ ಮಾಡ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕಸ ಹೊಡಿ ಎಂದರೆ ಕಸ ಹೊಡೆಯುತ್ತೇನೆ. ರಾಜೀನಾಮೆ ಕೊಡು ಎಂದರೂ ಕೊಡ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಲೋಕಸಭೆಗೆ ಸುಧಾಕರ್ ಅವರು ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ದೈವಬಲ ಹಾಗೂ ಜನಬಲ ನನ್ನ ಕಡೆ ಇದೆ.
ಲೋಕಸಭೆಯಲ್ಲಿ ನಾವು ಹೆಚ್ಚು ಸ್ಥಾನ ಪಡೆಯುತ್ತೇವೆ. ಮುಂದಿನ ಚುನಾವಣೆಯಲ್ಲಿ ಸೋಲು ಅಥವಾ ಗೆಲುವು ಎಂದು ನಾನು ಕೆಲಸ ಮಾಡ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕಸ ಹೊಡಿ ಎಂದರೆ ಕಸ ಹೊಡೆಯುತ್ತೇನೆ. ರಾಜೀನಾಮೆ ಕೊಡು ಎಂದರೂ ಕೊಡ್ತೇನೆ. ನಾನು ಯಾವುದೇ ನಿಗಮ ಮಂಡಳಿಯ ಆಕಾಂಕ್ಷಿಯಲ್ಲ. ಪಕ್ಷ ಲೋಕಸಭೆಗೆ ನಿಲ್ಲು ಎಂದರೆ ನಾಳೆಯೇ ನಿಲ್ಲುತ್ತೇನೆ ಎಂದಿದ್ದಾರೆ.ಇನ್ನೂ ರಾಮ ಮಂದಿರ ವಿಷಯದಲ್ಲಿ ನಮಗೆ ಗೊಂದಲ ಇಲ್ಲ,
How to Peel Ginger: ಸಿಂಪಲ್ ಟ್ರಿಕ್ಸ್ ಮೂಲಕ ಶುಂಠಿ ಸಿಪ್ಪೆ ಫಟಾಫಟ್ ಆಗಿ ಸುಲಿಯಬಹುದು..!
ನಾವು ಹಿಂದೂಗಳೇ, ನಾವು ಶ್ರೀರಾಮನ ಆರಾಧಕರು. ನನ್ನ ಎದೆ ಸೀಳಿದರೆ ಶ್ರೀರಾಮ ಸಿದ್ದರಾಮ ಇಬ್ಬರೂ ಇದ್ದಾರೆ. ಬಿಜೆಪಿಯವರು ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುತ್ತಿದ್ದಾರೆ. ರಾಮ ಮಂದಿರ ಓಪನ್ ಮಾಡಿಸಿದ್ದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.22ರ ನಂತರ ರಾಮಂದಿರಕ್ಕೆ ಹೋಗುತ್ತೇವೆ ಎಂದಿದ್ದಾರೆ. ನಾವು ಹೋಗುತ್ತೇವೆ. ನಾವೂ ಶ್ರೀರಾಮನ ಆರಾಧಕರು, ನಮಗೂ ದೈವ ಭಕ್ತಿ ಇದೆ. ದೈವ ಭಕ್ತಿ ಇರೋದಕ್ಕೆ ನಾವು ಅಧಿಕಾರಕ್ಕೆ ಬಂದಿರೋದು ಎಂದಿದ್ದಾರೆ.