ಬೆಂಗಳೂರು:- ನಗರದಲ್ಲಿ ಬೈಕ್ ಕಳ್ಳರ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಶೋ ರೂಂನಲ್ಲಿ ನೋಡುವಂತೆ ಬೈಕ್ ಗಳನ್ನು ಸೆಲೆಕ್ಟ್ ಮಾಡಿ ಕಳ್ಳತನ ಮಾಡಿರುವ ಘಟನೆ ಚಾಮರಾಚಪೇಟೆ ಬಳಿಯ ಕರ್ನಾಟಕ ಬೆಲ್ ಹೌಸ್ ಬಳಿಯ ಏರಿಯಾದಲ್ಲಿ ಜರುಗಿದೆ.
ತಮಗಿಷ್ಟ ಬಂದಂತಹ ಬೈಕ್ ಗಳನ್ನು ಖದೀಮರು ಕಳ್ಳತನ ಮಾಡುತ್ತಿದ್ದು, ಏರಿಯಾದಲ್ಲಿ ಯಾರು ಇಲ್ಲವೆಂದು ಗಮನಿಸಿ, ನಂತರ ಯಾರು ಓಡಾಡುತ್ತಿಲ್ಲವೆಂದು ನೋಡಿಕೊಂಡು ಈ ಕೃತ್ಯ ಎಸಗಿದ್ದಾರೆ. ಇಬ್ಬರು ಖತರ್ನಾಕ್ ಕಳ್ಳರು ಕದಿಯುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಹ್ಯಾಂಡ್ಲಾಕ್ ಆಗಿದ್ದರು ಸಹ ಈ ಖತರ್ನಾಕ್ ಖದೀಮರು, ಆರಾಮಾಗಿ ಹ್ಯಾಂಡಲ್ ಮುರಿಯುತ್ತಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಕಳ್ಳತನ ವಿಡಿಯೋ ಎಕ್ಸ್ನಲ್ಲಿ ಹಾಕಿ ನ್ಯಾಯಕ್ಕಾಗಿ ಸ್ಥಳಿಯರು ಆಗ್ರಹಿಸಿದ್ದಾರೆ.