ಬಳ್ಳಾರಿ:- ನಿನ್ನೆ ರಾತ್ರಿ ಕ್ಷುಲಕ ಕಾರಣಕ್ಕೆ ಪ್ರಾರಂಭವಾದ ಗಂಡ ಹೆಂಡತಿಯ ಜಗಳ ಇಂದು ಬೆಳ್ಳಂಬೆಳ್ಳಗೆ ಕೊಲೆಯಲ್ಲಿ ಅಂತ್ಯವಾಗಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಠಾಣಾ ವ್ಯಾಪ್ತಿಯ ಬಲಕುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇಂದು ಬೆಳ್ಳಂಬೆಳ್ಳಗೆ ಸುಮಾರು 3:30 ಸಮಯದಲ್ಲಿ ಗಂಡ ರಸೂಲ್(35), ನಿದ್ರಾವಸ್ಥೆಯಲ್ಲಿದ ಹೆಂಡತಿ ಮೈಮೂನ್ (25) ಕುತ್ತಿಗೆಗೆ ಕೊಡಲಿಯಿಂದ ಹಾಕಿದ ಎಟಿಗೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ.
ಗಂಡ ಹೆಂಡತಿಯ ಜಗಳದ ನಡುವೆ ಕೂಸು ಬಡವಾಯಿತು ಎನ್ನುವ ಗಾದೆ ಮಾತಿನಂತೆ, ಈ ದಂಪತಿಯ ಎರಡು ಗಂಡು ಹುಡುಗರು ಅನಾಥವಾಗಿವೆ. ಎರಡು ಕಿಡ್ನಿ ಕಳೆದು ಕೊಂಡಿದ ಗಂಡ (ಆರೋಪಿ) ರಸೂಲ್ ಗೆ ಮೈಮೂನ್ ಳು ಪ್ರತಿದಿನ ಕೂಲಿ ಕೆಲಸಕ್ಕೆ ಹೋಗಿ ಗಂಡನಿಗೆ ಚಿಕಿತ್ಸೆ ಕೊಡಿಸುತ್ತಿದ್ದಳು. ಅಂತವಳನ್ನು ಸಾಯಿಸುವ ಕೆಲಸಮಾಡಿದ ಗಂಡ ರಸೂಲ್ ಗೆ ಊರಿನ ಗ್ರಾಮಸ್ಥರು ಹಿಡಿ ಶಾಪಹಾಕಿದರು.