ಬೆಂಗಳೂರು: ನೇಮಕಾತಿ ಆದೇಶ ಪ್ರತಿಗಾಗಿ ನೂರಾರು ಆಕಾಂಕ್ಷಿಗಳು ಕೆಪಿಟಿಸಿಎಲ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೆಪಿಸಿಎಲ್ ನಿಂದ ಆರ್ಡರ್ ಕಾಪಿ ಯಾವಾಗ ಕೊಡ್ತೀರಾ ಅಂತ ಬಿತ್ತಿ ಪತ್ರ ಕಾರಿಗೆ ಅಂಟಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಕಚೇರಿಯ ಗೇಟ್ ನ ಮುಂಭಾಗ ದಲ್ಲಿ ಭಿತ್ತಿ ಪತ್ರ ಅಂಟಿಸಿದ ಕಾರನ್ನು ಅಡ್ಡಲಾಗಿ ನಿಲ್ಲಿಸಿ ಯಾವುದೇ ಕಾರುಗಳು ಒಳಗೆ ಹಾಗೂ ಹೊರಗೆ ಹೋಗದಂತೆ ಗೇಟ್ ಗೆ ಅಡ್ಡ ನಿಲ್ಲಿಸಿ ಗೇಟ್ ಮುಂಭಾಗ ಕೂತು ಕೆಪಿಟಿಸಿಎಲ್ ಗೆ ದಿಕ್ಕಾರ ಕೂಗುತ್ತಾ ಪ್ರತಿಭಟಿಸಿದರು.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಇನ್ನ ಕೆಪಿಟಿಸಿಎಲ್ ನಿಂದ 2022 ಜನವರಿಯಂದು 1500 ಎಇ, ಜೆಇ ಹುದ್ದೆಗೆ ಅರ್ಜಿಯನ್ನು ಸ್ವೀಕರಿಸ ಲಾಗಿತ್ತು ನಂತರ ಜುಲೈ 2022ರಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆದಿದ್ದು ಜನವರಿ 2023 ಫಲಿತಾಂಶ ನೀಡಲಾಗಿದೆ, ನಂತರ ದಾಖಲಾತಿ ಪರಿಶೀಲಿಸಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿದ್ದಾರೆ ಹೊರತು ಇನ್ನೂ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ, ಪರೀಕ್ಷೆ ನಡೆದು ಎರಡು ವರ್ಷವಾದ್ರೂ ಇನ್ನೂ ನೇಮಕಾತಿ ಆದೇಶ ಪ್ರತಿ ನೀಡಿಲ್ಲ, ಶೀಘ್ರದಲ್ಲಿ ನೇಮಕಾತಿ ಆದೇಶ ಪ್ರತಿ ನೀಡುವಂತೆ ಪ್ರತಿಭಟನ ನಿರತ ಆಕಾಂಕ್ಷಿಗಳು ಆಗ್ರಹಿಸಿದರು.