ಡಿ.ಜೆ ಚಕ್ರವರ್ತಿ (ಚಕ್ರವರ್ತಿ ಚಂದ್ರಚೂಡ) ನಿರ್ದೇಶನದಲ್ಲಿ ಮೂಡಿ ಬರಲಿರುವ ಹುಲಿ ನಾಯಕ ಸಿನಿಮಾದ ಮೋಷನ್ ಪೋಸ್ಟರ್ (Motion poster) ರಿಲೀಸ್ ಆಗಿದೆ. ಬಿಡುಗಡೆಯಾದ ಪೋಸ್ಟರ್ ನಲ್ಲಿ ಹತ್ತು ಹಲವು ಕೌತುಕದ ವಿಷಯಗಳು ತುಂಬಿವೆ. ವೀರ ಸಂಗೊಳ್ಳಿ ರಾಯಣ್ಣನ ಗಿಗಿ ಪದವನ್ನು ಬಳಸಿಕೊಂಡು ಅನ್ಯಾಯಕ್ಕೊಳಗಾದವರ ನ್ಯಾಯ ಕೇಳುತ್ತಿದ್ದಾರೆ ನಿರ್ದೇಶಕ. ಟ್ಯಾಗ್ ಲೈನ್ ಆಗಿ ಜಸ್ಟಿಸ್ ಫಾರ್ ಸೌಮ್ಯ ಎಂದು ಹೆಸರಿಟ್ಟಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ಏನೆಲ್ಲ ವಿಷಯಗಳು ಇರಲಿವೆ ಎನ್ನುವುದು ಸದ್ಯಕ್ಕಿರುವ ಕ್ಯೂರಿಯಾಸಿಟಿ.
ಹುಲಿ ನಾಯಕ ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಜನವರಿಯಿಂದ ಚಿತ್ರೀಕರಣಕ್ಕೆ ನಿರ್ದೇಶಕರು ಪ್ಲ್ಯಾನ್ ಮಾಡಿದ್ದು, ಅದಕ್ಕೂ ಮುನ್ನ ತಮ್ಮ ಚಿತ್ರದ ನಾಯಕನಿಗೆ ಭರ್ಜರಿ ತಯಾರಿಯನ್ನೂ ಮಾಡಿಸುತ್ತಿದ್ದಾರೆ ಚಕ್ರವರ್ತಿ. ಸಿನಿಮಾ ಶುರುವಾಗುವ ಮುನ್ನವೇ ಆಡಿಯೋ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದು, ಚಿತ್ರದ ಬಗ್ಗೆ ಈಗಿನಿಂದಲೇ ಹೈಪ್ ಕ್ರಿಯೇಟ್ ಆಗುತ್ತಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ವರ ಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ರಿಯಲ್ ಸ್ಟಾರ್ ಉಪೇಂದ್ರ (Upendra) ತುಂಬು ಪ್ರೀತಿಯಿಂದ ಮಯೂರ ಮೋಶನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಮಂಜುನಾಥ್. ಡಿ ನಿರ್ಮಿಸುತ್ತಿರುವ, ಡಿ.ಜೆ ಚಕ್ರವರ್ತಿ (DJ Chakravarty) ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ (Title) ಅನಾವರಣಗೊಳಿಸಿದ್ದರು.
![](https://ainlivenews.com/wp-content/uploads/2024/01/Ad-Banner-copy-scaled.jpg)