ಅಹಮದಾಬಾದ್ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 142 ರನ್ಗಳಿಂದ ಸೋಲಿಸಿ 3-0 ರಿಂದ ಸರಣಿಯನ್ನು ಗೆದ್ದುಕೊಂಡಿದೆ. ಶುಭ್ಮನ್ ಗಿಲ್ (112), ವಿರಾಟ್ ಕೊಹ್ಲಿ (52) ಮತ್ತು ಶ್ರೇಯಸ್ ಅಯ್ಯರ್ (78) ಅವರ ಅದ್ಭುತ ಬ್ಯಾಟಿಂಗ್ನಿಂದ ಭಾರತ 356 ರನ್ ಗಳಿಸಿತು.
Immunity Power: ಈ ಆಹಾರಗಳನ್ನು ತಿಂದ್ರೆ ಸಾಕು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ..!
ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 214 ರನ್ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಭಾರತ 14 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಇನ್ನೂ ಈ ಗೆಲುವಿನ ಬಳಿಕ ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಕೈಯಿಂದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟ್ರೋಫಿ ಸ್ವೀಕರಿಸಿದರು. ಆ ಬಳಿಕ ನಡೆದ ಫೋಟೋಶೂಟ್ ವೇಳೆ ಭಾರತೀಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲದಂತೆ ವಿರಾಟ್ ಕೊಹ್ಲಿ ಮಾತ್ರ ಫೋನ್ನಲ್ಲೇ ಮೈಮರೆತಿದ್ದರು.
https://x.com/_Zsports/status/1889875801895739535?ref_src=twsrc%5Etfw%7Ctwcamp%5Etweetembed%7Ctwterm%5E1889875801895739535%7Ctwgr%5Ec816cb38c17b2ba69eac91918deb1cb6031cc634%7Ctwcon%5Es1_&ref_url=https%3A%2F%2Ftv9kannada.com%2Fsports%2Fcricket-news%2Fvirat-kohli-on-the-phone-call-during-the-trophy-celebration-zp-977818.html
ಇದೀಗ ಟೀಮ್ ಇಂಡಿಯಾ ಸಂಭ್ರಮಿಸುತ್ತಿದ್ದರೂ, ಕೊಹ್ಲಿ ಫೋನ್ನಲ್ಲಿ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪರ ವಿರೋಧ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗುತ್ತಿದೆ. ಕೆಲವರು ಕೊಹ್ಲಿಯನ್ನು ಫ್ಯಾಮಿಲಿ ಮ್ಯಾನ್ ಎಂದು ಹಾಡಿ ಹೊಗಳಿದರೆ, ಮತ್ತೆ ಕೆಲವರು ವಿರಾಟ್ ಕೊಹ್ಲಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.